ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ : ಏಳಿಂಜೆ ಬಳಿ ಗದ್ದೆಯಲ್ಲಿ ಕಳೆಗೆ ಔಷಧಿ ಸಿಂಪಡಿಸುತ್ತಿದ್ದ ವ್ಯಕ್ತಿ ಆಕಸ್ಮಿಕ ಸಾವು

ಮುಲ್ಕಿ:ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ಗದ್ದೆಯಲ್ಲಿನ ಕಳೆಗೆ ಜೌಷದಿ ಸಿಂಪಡಿಸುವಾಗ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಶುಕ್ರವಾರ ಮೃತಪಟ್ಟಿದ್ದಾರೆ ಮೃತಪಟ್ಟವರನ್ನು ಪಟ್ಟೆ ಮಾಗಂದಡಿ ನಿವಾಸಿ ಅಶೋಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅಶೋಕ್ ಶೆಟ್ಟಿಯವರು ರೈತರಾಗಿದ್ದು, ತಮ್ಮ ಗದ್ದೆಯಲ್ಲಿನ ಕಳೆ ನಿವಾರಣೆಗೆ ಜೌಷದಿ ಸಿಂಪಡಿಸುತ್ತಿರುವಾಗ ಆಕಸ್ಮಿಕವಾಗಿ ಗದ್ದೆಯಲ್ಲೇ ಬಿದ್ದಿದ್ದಾರೆ, ಸ್ವಲ್ಪ ಹೊತ್ತಿನ ಬಳಿಕ ಅದೇ ಹಾದಿಯಲ್ಲಿ ಹೋಗುತ್ತಿದ್ದ ಮಹಿಳೆ ಗಮನಿಸಿದ್ದು ಕೂಡಲೇ ಅಶೋಕ್ ಅಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ ಪಟ್ಟಿದ್ದು.

ಅಶೋಕ್ ರವರ ಸಾವಿಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಒರ್ವ ಪುತ್ರ ಒರ್ವ ಪುತ್ರಿಯರನ್ನು ಅಗಲಿದ್ದಾರೆ.

Edited By : PublicNext Desk
Kshetra Samachara

Kshetra Samachara

03/01/2025 08:22 pm

Cinque Terre

2.6 K

Cinque Terre

0