ಲಖನೌ: ಇಬ್ಬರು ಬಾಲಕಿಯರು ಒಬ್ಬ ಹುಡುಗನಿಗಾಗಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಗ್‌ಪತ್‌ನಲ್ಲಿರುವ ಪ್ರೌಢಶಾಲೆಯ ಹತ್ತನೇ ತರಗತಿಯ ಇಬ್ಬರು ಬಾಲಕಿಯರು ಒಂದೇ ಹುಡುಗನನ್ನು ಲವ್ ಮಾಡುತ್ತಿದ್ದರು. ಈ ವಿಷಯ ಗೊತ್ತಿಲ್ಲದೇ ಆತ ಇಬ್ಬರು ಹುಡುಗಿಯರ ಪೈಕಿ ಒಬ್ಬಳ ಬಳಿ ಮಾತನಾಡಿದ್ದಾನೆ. ಇದನ್ನು ಕಂಡು ಕೋಪಗೊಂಡ ಮತ್ತೋರ್ವ ಬಾಲಕಿ ಆಕೆಯೊಂದಿಗೆ ಜಗಳಕ್ಕಿಳಿದಿದ್ದಾಳೆ.
ಇಬ್ಬರ ನಡುವೆ ರಸ್ತೆಯಲ್ಲಿ ಮಾತಿಗೆ ಮಾತು ಬೆಳೆದು, ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಪರಸ್ಪರರನ್ನು ಎಳೆದಾಡಿ ಹೊಡೆದಾಡಿಕೊಂಡಿದ್ದಾರೆ. ಇವರ ಜಗಳ ಕಂಡ ಸ್ಥಳೀಯರು ಇಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದಾರೆ.
PublicNext
02/01/2025 10:55 pm