ಬ್ರಹ್ಮಾವರ: ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರೊಬ್ಬರು ಮತ್ತು ಇಬ್ಬರು ಸದಸ್ಯರು ಸಂಘದ ಮಹಾ ಸಭೆ ನಡೆಯುವ ಮುನ್ನ ಜನರಿಗೆ ತಪ್ಪು ಮಾಹಿತಿ ನೀಡಿ ಪಬ್ಲಿಕ್ ನೆಕ್ಸ್ಟ್ ಸೇರಿದಂತೆ ನಾನಾ ಜಾಲತಾಣದಲ್ಲಿ ಹರಿಯುತ್ತಿರುವ ಸುದ್ದಿಯ ಕುರಿತು ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಸಂಘದ ಪ್ರಧಾನ ಕಛೇರಿಯಲ್ಲಿ ಮಾಹಿತಿ ನೀಡಿದರು.
ನಿರ್ದೇಶಕರಲ್ಲಿ ಓರ್ವರಾದ ಕುಶಲ ಶೆಟ್ಟಿ ಮತ್ತು ಸಂಘದ ಸದಸ್ಯರಾದ ಉಲ್ಲಾಸ್ ಶೆಟ್ಟಿ, ರಾಕೇಶ್ ನಾಯ್ಕ್ ಸಹಕಾರಿ ಸಂಘದ ಹೊಸ ಕಟ್ಟಡ ರಚನೆಗೆ ಜಾಗ ಖರೀದಿ ಸೇರಿದಂತೆ ಬೇಕಾ ಬಿಟ್ಟಿ ಖರ್ಚು ಮಾಡಿದ್ದಾರೆ ಎಂದು ಹೇಳಿ ಉತ್ತಮ ಹೆಸರು ಮತ್ತು ಲಾಭವನ್ನು ಕಂಡುಕೊಂಡ ಸಂಘ ಸದಸ್ಯರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಕಟ್ಟಡ ರಚನೆಗೆ ಅದರದೇ ಆದ ಸಮಿತಿಯನ್ನು ನ್ಯಾಯ ಸಮ್ಮತವಾಗಿ ಮಾಡಲಾಗಿದ್ದು ಸಂಘದ ಬೆಳವಣಿಗೆ ಮತ್ತು ಲಾಭಕ್ಕೆ ಮಹತ್ವ ನೀಡಲಾಗಿದೆ. ಆ ಕುರಿತು ಯಾವುದೇ ಸದಸ್ಯರು ಸಂಘದ ಪ್ರಧಾನ ಕಛೇರಿಯಲ್ಲಿ ಮಾಹಿತಿ ಪಡೆದುಕೊಳ್ಳ ಬಹುದು ಎಂದು ತಿಳಿಸಿದ್ದಾರೆ. ಕಟ್ಟಡ ಸಮಿತಿಯ ಉದಯ ಚಂದ್ರ ಶೆಟ್ಟಿ, ನಿರ್ದೇಶಕರುಗಳಾದ ನಿರಂಜನ ಹೆಗ್ಡೆ ಅಲ್ತಾರು, ಸುರೇಶ್ ಶೆಟ್ಟಿ ಕಾವಡಿ, ಸುರೇಂದ್ರ ಶೆಟ್ಟಿ ಅಚ್ಲಾಡಿ, ಶಂಕರ ಪೂಜಾರಿ ಶಿರಿಯಾರ ಉಪಸ್ಥಿತರಿದ್ದರು.
Kshetra Samachara
02/01/2025 03:53 pm