ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಯುವತಿಯರ ಖಾಸಗಿ ಅಂಗಾಂಗಗಳ ವಿಡಿಯೋ, ಫೋಟೋ ತೆಗೆಯುತ್ತಿದ್ದ ಕಾಮುಕನನ್ನು ಲಾಕ್ ಮಾಡಲಾಗಿದೆ. ಕಿರಾತಕ ಮಹೇಶ್‌ನನ್ನು ಜಯನಗರ ಪೊಲೀಸರಿಗೆ ನಮ್ಮ ಮೆಟ್ರೋ ಸಿಬ್ಬಂದಿ ಒಪ್ಪಿಸಿದ್ದಾರೆ.
ಹೌದು.. ನಮ್ಮ ಮೆಟ್ರೋ ಸಿಲಿಕಾನ್ ಸಿಟಿಯಲ್ಲಿ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿದೆ. ಪ್ರತಿ ನಿತ್ಯ ಸಾವಿರಾರು ಜನ ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡುತ್ತಾರೆ. ಇಷ್ಟು ದಿನ ನಮ್ಮ ಮೆಟ್ರೋ ಮಹಿಳೆಯರಿಗೆ ಸೇಫ್ ಅಂದುಕೊಂಡಿದ್ವಿ. ಆದರೆ ಇದೀಗ ಕಾಮುಕನೊಬ್ಬ ಮೆಟ್ರೋದಲ್ಲಿ ಪ್ರಯಾಣ ಮಾಡುವ ಮಹಿಳೆಯರ ಖಾಸಗಿ ಅಂಗಾಂಗಳ ಫೋಟೋ, ವಿಡಿಯೋ ತೆಗೆದು ಸಿಕ್ಕಿಬಿದ್ದಿದ್ದಾನೆ.
ಡಿಸೆಂಬರ್ 25ರಂದು ಬೆಳಿಗ್ಗೆ 9 ಗಂಟೆಗೆ ಯುವತಿಯೊಬ್ಬಳು ಮೆಜೆಸ್ಟಿಕ್ ನಿಂದ ಜೆಪಿ ನಗರ ಮೆಟ್ರೋ ಸ್ಟೇಷನ್‌ಗೆ ಹೋಗುತ್ತಿದ್ದಳು. ಈ ವೇಳೆ ಮಹೇಶ್ ಯುವತಿಯ ಖಾಸಗಿ ಅಂಗಾಂಗಗಳ ವಿಡಿಯೋ, ಫೋಟೋ ತೆಗೆಯುವುದನ್ನು ಗಮನಿಸಿ ನಾಲ್ಕು ಬಾರಿಸಿದ್ದಾಳೆ. ಇದೇ ವೇಳೆ ನೈಟ್ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಿದ್ದ ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳಾದ ಸುಜಿತ್ ಮತ್ತು ಎಸ್.ಜಿ ರಾಮ್ ಬಹದ್ದೂರ್ ಯುವತಿಯ ಸಹಾಯಕ್ಕೆ ದಾವಿಸಿದ್ದಾರೆ. ಕಾಮುಕನ ಮೊಬೈಲ್ ಪರಿಶೀಲನೆ ನಡೆಸಿದಾಗ 50 ಯುವತಿಯರ ಫೋಟೋ ಮತ್ತು ವಿಡಿಯೋ ಸಿಕ್ಕಿವೆ. ಸದ್ಯ ಕಾಮುಕನನ್ನು ಜಯನಗರ ಪೊಲೀಸ್ ಸ್ಟೇಷನ್‌ಗೆ ಒಪ್ಪಿಸಿದ್ದು, ಮೆಟ್ರೋ ರೂಲ್ಸ್ ಸೆಕ್ಷನ್ 59ರ ಅಡಿಯಲ್ಲಿ ಕಾಮುಕನಿಗೆ 5 ಸಾವಿರ ದಂಡ ವಿಧಿಸಲಾಗಿದೆ.
PublicNext
02/01/2025 02:33 pm