ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಉಸ್ತುವಾರಿ ಸಚಿವರಿಗೆ ಉಡುಪಿ ಬೇಡವಾಯಿತೇ?

ವಿಶೇಷ ವರದಿ: ರಹೀಂ ಉಜಿರೆ

ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯದ ಪ್ರಭಾವೀ ಸಚಿವರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ,ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಜವಾಬ್ದಾರಿಯೂ ಇದೆ.ಆದರೆ ಅವರು ಉಸ್ತುವಾರಿ ಸಚಿವೆಯಾಗಿ ಉಡುಪಿಗೆ ನ್ಯಾಯ ಒದಗಿಸಿಲ್ಲ ಎಂಬ ಮಾತುಗಳು ಅವರ ಪಕ್ಷದಲ್ಲೇ ಕೇಳಿಬರುತ್ತಿವೆ.

ಕರಾವಳಿಯಲ್ಲಿ ಬಹುತೇಕ ಬಿಜೆಪಿ ಶಾಸಕರೇ ಇದ್ದಾರೆ.ದಕ್ಷಿಣ ಕನ್ನಡದಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಇರುವುದು ಬಿಟ್ಟರೆ ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೊರಗಿನ ಉಸ್ತುವಾರಿ ಮಂತ್ರಿಯನ್ನು ಪಡೆಯಬೇಕಾದ ಕರ್ಮ ಉಡುಪಿ ಜನರದ್ದು.ಹೋಗಲಿ ,ಹೊರಜಿಲ್ಲೆಯವರಾದರೂ ಜಿಲ್ಲೆಯ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆಯೇ ಎಂದರೆ ಅದೂ ಇಲ್ಲ.

ಕಳೆದ ಒಂದೂವರೆ ವರ್ಷದಲ್ಲಿ ಹೆಬ್ಬಾಳ್ಕರ್ ಉಡುಪಿಗೆ ಬಂದಿರುವುದು ಬೆರಳೆಣಿಕೆಯಷ್ಟು ಸಲ! ಸ್ವಾಂತಂತ್ರ್ಯೋತ್ಸವ ,ರಾಜ್ಯೋತ್ಸವ ,ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕಷ್ಟೇ ಅವರ ಭೇಟಿ ಸೀಮಿತವಾಗಿದೆ.ಉಸ್ತುವಾರಿ ಸಚಿವರು ಕೆಡಿಪಿ ಸಭೆಯನ್ನೇ ನಿಗದಿತವಾಗಿ ಕರೆಯುತ್ತಿಲ್ಲ ಎಂದು ಉಡುಪಿ ಶಾಸಕರು ಇತ್ತೀಚೆಗೆ ಅಸಮಾಧಾನ ತೋಡಿಕೊಂಡಿದ್ದೂ ಇದೆ.ಅದಾದ ನಂತರ ಡಿಸೆಂಬರ್ ನಲ್ಲಿ ಸಚಿವರು ಸಭೆ ಕರೆದು ಹೋಗಿದ್ದಾರೆ.

ಎರಡು ಅಥವಾ ಮೂರು ತಿಂಗಳಿಗೊಮ್ಮೆ ಜಿಲ್ಲೆಗೆ ಭೇಟಿ ನೀಡುವ ಸಚಿವೆ ಬಗ್ಗೆ ಕೈ ಕಾರ್ಯಕರ್ತರಿಗೂ ಅಸಮಾಧಾನ ಇದೆ.ಕಳೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿತ್ತು. ಗ್ಯಾರೆಂಟಿ ಯೋಜನೆಗಳ ಹೊರತಾಗಿಯೂ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು ತಂದುಕೊಟ್ಟಿದ್ದರು. ನಂತರದ ದಿನಗಳಲ್ಲಿ ಸ್ವಪಕ್ಷೀಯರೇ ಗೋ ಬ್ಯಾಕ್ ಲಕ್ಷ್ಮಿ ಹೆಬ್ಬಾಳ್ಕರ್ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.ಅಧಿಕಾರ ವಹಿಸಿಕೊಂಡಾಗಿನಿಂದ ಕಾರ್ಯಕತ್ರರ ಕೈಗೂ ಉಸ್ತುವಾರಿ ಸಚಿವರು ಸಿಗುತ್ತಿಲ್ಲ,ಜನರ ಕೈಗೂ ಸಿಗುತ್ತಿಲ್ಲ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.

Edited By : Shivu K
Kshetra Samachara

Kshetra Samachara

02/01/2025 01:38 pm

Cinque Terre

36.36 K

Cinque Terre

20

ಸಂಬಂಧಿತ ಸುದ್ದಿ