ಬೆಳಗಾವಿ: ಬೆಳಗಾವಿಯಲ್ಲಿ ಮೈಕ್ರೋ ಫೈನಾನ್ಸ್ ನಿಂದ ಹಣ ಪಡೆದು ವಂಚನೆಗೆ ಒಳಗಾದ ಮಹಿಳೆಯರ ಬಗ್ಗೆ ಚರ್ಚೆ ಮಾಡಲಾಗಿದೆ. ಮಹಿಳೆಯರಿಗೆ ತೊಂದರೆ ಕೊಡದಂತೆ ಜಿಲ್ಲಾಧಿಕಾರಿಗಳು ಮತ್ತು ನಾವು ಫೈನಾನ್ಸ್ ಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯ ಮೂರ್ನಾಲ್ಕು ತಾಲೂಕುಗಳಲ್ಲಿ ಕಳೆದ ಒಂದು ತಿಂಗಳಿನಿಂದ ಮೈಕ್ರೋ ಫೈನಾನ್ಸ್ ನಿಂದ ಸಾಲದ ವಿಚಾರವಾಗಿ ಗೊಂದಲ ಸೃಷ್ಠಿಯಾಗಿದೆ. ಸುಮಾರು ಹದಿನೈದು ಸಾವಿರ ಜನರಿಗೆ ಗೊತ್ತಿಲ್ಲದೆ ಲೋನ್ ಕೊಟ್ಟಿದ್ದಾರೆ. ಅದು ಸಬ್ಸಿಡಿ ಹಣ ಅಂತಾ ಕೊಟ್ಟಿದ್ದಾರೆ. ಅದು ಸಬ್ಸಿಡಿ ಹಣ ಅಲ್ಲಾ ಲೋನ್ ಹಣ ಅದು. ನಾಲ್ಕೈದು ಜನ ಮಹಿಳೆಯರೇ ಇದರ ನೇತೃತ್ವ ವಹಿಸಿದ್ದಾರೆ. ಈ ವಿಚಾರ ಕುರಿತು ಈಗಾಗಲೇ ಒಬ್ಬರನ್ನು ಅರೆಸ್ಟ್ ಮಾಡಿದ್ದೇವೆ. ಇನ್ನು ಇಬ್ಬರ ಬಗ್ಗೆ ತನಿಖೆ ಮಾಡಲು ಹೇಳಿದ್ದೇವೆ. ಪೊಲೀಸ್ ಅಧಿಕಾರಿಗಳನ್ನು ನೇಮಿಸುವ ಕೆಲಸ ಮಾಡುತ್ತೇವೆ. ಇದರಲ್ಲಿ ದುಡ್ಡು ಮೂರನೆ ವ್ಯಕ್ತಿಗೆ ಹೇಗೆ ಹೋಗಿದೆ ಎಂದು ಪ್ರಶ್ನೆ ಬಂದಿದೆ.
ಅವರ ಅಕೌಂಟ್ ಗೆ ಬಂದ ದುಡ್ಡು ಮೂರನೇ ವ್ಯಕ್ತಿಗೆ ಹೋಗಿದೆ. ಈಗಾಗಲೆ ಫೈನಾನ್ಸ್ ನವರು ಮಹಿಳೆಯರಿಗೆ ತೊಂದರೆ ಕೊಡದಂತೆ ಡಿಸಿ ಮತ್ತು ನಾವು ಸೂಚನೆ ಕೊಟ್ಟಿದ್ದೇವೆ. ಹದಿನೈದು ಸಾವಿರ ಮಂದಿಗೆ 40 ಫೈನಾನ್ಸ್ ನವರು ಕೂಡಿ ಹಣ ಕೊಟ್ಟಿದ್ದಾರೆ. ಅಂದಾಜು ನೂರು ಕೋಟಿ ಮೇಲೆ ಆಗಿದೆ. ಇದರಲ್ಲಿ ಖಂಡಿತ ಮೋಸ ಆಗಿದೆ. ಯಾರು ಮಾಡಿದ್ದಾರೆ ಎಂದು ಕಂಡು ಹಿಡಿಯಬೇಕಿದೆ. ಸಬ್ಸಿಡಿ ಹಣ ಬರುತ್ತೆ ಎಂದು ಮಹಿಳೆಯರು ಸಹಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ ರೀತಿ ಫಸ್ಟ್ ಟೈಮ್ ಆಗಿದೆ ಎಂದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಬಿಜೆಪಿ ಪೋಸ್ಟರ್ ವಾರ್ ವಿಚಾರವಾಗಿ ಮಾತನಾಡಿದ ಅವರು, ಮಾಡೇ ಮಾಡುತ್ತಾರೆ ಅವರು, ಅದರಲ್ಲಿ ಎಷ್ಟು ಸತ್ಯಾಂಶ ಇದೆ ಹೊರಗೆ ಬರಬೇಕು. ತನಿಖೆ ಆಗಲಿ ಸತ್ಯಾಂಶ ಹೊರಬರಲಿ. ಆಮೇಲೆ ನೋಡೋಣ. ಪೊಲೀಸರು ತನಿಖೆ ಮಾಡುತ್ತಾರೆ ಎಂದರು.
PublicNext
31/12/2024 05:56 pm