ಅಥಣಿ : ರಾಜ್ಯದಲ್ಲಿಯೇ ಅತೀದೊಡ್ಡ ಗ್ರಾಮ ಪಂಚಾಯತಿ ಸಂಕೋನಟ್ಟಿ ಗ್ರಾಮ ಪಂಚಾಯತಿಯಲ್ಲಿ ರಮೇಶ ಜಾರಕಿಹೊಳಿ ಬಣದ ವಿರುದ್ದ ಶಾಸಕ ಲಕ್ಷ್ಮಣ ಸವದಿ ಬಣದವರು ಇಂದು ಮೇಲುಗೈ ಸಾಧಿಸಿದರು.
ಸಂಕೋನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ ಕಕಮರಿ ವಿರುದ್ದ ಇಂದು ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿಯಾಗಿದೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಶ ಸಂಪಗಾಂವಿ ಅವರು ಹೇಳಿದರು.
ಅವರು ಸಂಕೋನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಮಾಧ್ಯಮದವರ ಜೊತೆ ಮಾತನಾಡಿ ಒಟ್ಟು 56 ಜನ ಸದಸ್ಯರ ಬಲದಲ್ಲಿ ಅವಿಶ್ವಾಸ ನಿರ್ಣಯಕ್ಕೆ 38 ಮತಗಳು ಬೇಕಿದ್ದು ಇಂದು 42 ಜನ ಕೈ ಎತ್ತುವ ಮೂಲಕ ಅವಿಶ್ವಾಸ ಗೊತ್ತುವಳಿ ಸ್ವೀಕಾರ ಮಾಡಿ ಅಧ್ಯಕ್ಷನನ್ನು ಅಧಿಕಾರದಿಂದ ಇಳಿಸಿದರು, ಹಾಗೂ 14 ಜನ ಸದಸ್ಯರು ಹಾಜರಾಗದೆ ಸಭೆಯಿಂದ ದೂರ ಉಳಿದರು ಎಂದು ಹೇಳಿದರು.
PublicNext
31/12/2024 04:27 pm