ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲೇಔಟ್ ನಿರ್ಮಾಣಕ್ಕಾಗಿ ಅಕ್ರಮವಾಗಿ ಕಲ್ಲು ಬಂಡೆ ಸ್ಫೋಟ - ಕರವೇ ಆಕ್ರೋಶ

ಬೆಂಗಳೂರು: ಲೇಔಟ್ ನಿರ್ಮಾಣಕ್ಕಾಗಿ ಸರ್ಕಾರಿ ಜಾಗದಲ್ಲಿದ್ದ ಬಂಡೆಯನ್ನ ಅಕ್ರಮವಾಗಿ ಸ್ಫೋಟಿಸಲಾಗಿದ್ದು, ಸರ್ಕಾರಿ ಜಾಗ ಕಬಳಿಸಿ ನಿವೇಶನಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಸರ್ಕಾರಿ ಜಾಗವನ್ನ ರಕ್ಷಣೆ ಮಾಡಿ ಬೇಲಿ ಹಾಕುವಂತೆ ಒತ್ತಾಯಿಸಿದ್ದಾರೆ.

ದೊಡ್ಡಬಳ್ಳಾಪುರ ನಗರಕ್ಕೆ ಹೊಂದಿಕೊಂಡಂತಿರುವ ಶಿವಪುರ ಗ್ರಾಮದ ಸರ್ವೆ ನಂಬರ್ 154ರಲ್ಲಿರುವ 33 ಗುಂಟೆ ಜಾಗವನ್ನ ಲೇಔಟ್ ಮಾಲೀಕರು ಕಬಳಿಸಿದ್ದು, ಈ ಜಾಗದಲ್ಲಿ ಕಲ್ಲು ಬಂಡೆಗಳಿವೆ. ರಾತ್ರೋರಾತ್ರಿ ಅಕ್ರಮವಾಗಿ ಬಂಡೆಯನ್ನ ಸ್ಪೋಟಿಸಿ, ಬಂಡೆಗಳನ್ನು ಕಾಣಿಸದಂತೆ ಹಳ್ಳದಲ್ಲಿ ಮುಚ್ಚಿ ಹಾಕಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ರಾಜಘಟ್ಟ ರವಿ ಆರೋಪಿಸಿದ್ದಾರೆ.

ಪ್ರತಿಭಟನೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ರಾಜಘಟ್ಟ ರವಿ, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿಯು ಸರ್ಕಾರಿ ಜಾಗ ಕಬಳಿಕೆ ಮಾಡಿರುವುದು ಈ ವ್ಯವಸ್ಥೆಯ ದುರಂತವಾಗಿದೆ. ಸರ್ಕಾರಿ ಜಾಗದಲ್ಲಿ ಮರಗಳನ್ನ ಕಡಿಯಲಾಗಿದೆ. ಪಕ್ಕದಲ್ಲಿಯೇ ಅರ್ಕಾವತಿ ನದಿ ಇದೆ ಹಾಗೂ ಅರ್ಕಾವತಿ ದೇವಸ್ಥಾನವಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬಳಕೆಯಾಗ ಬೇಕಿದ್ದ ಜಾಗವನ್ನ ಕಬಳಿಸಲಾಗಿದೆ ಎಂದು ಆರೋಪಿಸಿದರು. ಹಾಗೂ ಸರ್ಕಾರಿ ಜಾಗವನ್ನ ಗುರುತಿಸಿ ಬೇಲಿ ಹಾಕುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದರು.

Edited By : Ashok M
PublicNext

PublicNext

31/12/2024 07:42 am

Cinque Terre

48.4 K

Cinque Terre

1

ಸಂಬಂಧಿತ ಸುದ್ದಿ