ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮುಖ್ಯ ಶಿಕ್ಷಕ ಆತ್ಮಹತ್ಯೆ ಪ್ರಕರಣ - ಕಾಂಗ್ರೆಸ್ ಮುಖಂಡನ ಮೇಲೆ ಜಾತಿನಿಂದನೆ ಕೇಸ್

ಬೆಂಗಳೂರು: ಕಳೆದ ಶುಕ್ರವಾರ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮುಖ್ಯ ಶಿಕ್ಷಕ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡನ ನೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಅವರ ಆಪ್ತ ಹೊಸಹಳ್ಳಿ ಸತೀಶ್, ಪತ್ನಿ ಉಷಾ, ಸತೀಶ್ ಸಹೋದರಿ ಸೇರಿದಂತೆ ಕೆಲವರ ಮೇಲೆ ಮೃತ ನರಸಿಂಹಮೂರ್ತಿ ಪುತ್ರ ಪ್ರದೀಪ್ ನೀಡಿದ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿದೆ.

ಮೃತ ನರಸಿಂಹಮೂರ್ತಿ ನ್ಯಾಯ ಕೇಳಲು ಸತೀಶ್ ಮನೆ ಬಳಿ ಹೋದಾಗ ಸತೀಶ್ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ರಂತೆ. ಈ ನೋವಿನಲ್ಲೆ ಭಯದಿಂದ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಪ್ರದೀಪ್ ದೂರು ನೀಡಿದ್ದಾರೆ. ಇನ್ನೂ ಪ್ರಕರಣ ದಾಖಲಾದ ನಂತರ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸತೀಶ್ ಪತ್ನಿ ಉಷಾ ಹಾಗೂ ಸಹೋದರಿ ಗೋವಾದಲ್ಲಿ ತಲೆ ಮರೆಸಿಕೊಂಡಿರೋದಾಗಿ ಹೇಳಲಾಗ್ತಿದೆ. ಇನ್ನು ಸತೀಶ್ ಬಂಧನಕ್ಕೆ ವಿಶೇಷ ತಂಡ ರಚಿಸಿರೋದಾಗಿ ಹೇಳಲಾಗ್ತಿದೆ. ಆದ್ರೆ ಸತೀಶ್ ಸಾಕಷ್ಟು ಪ್ರಭಾವಿಯಾಗಿದ್ದು ರಾಜಕೀಯ ಒತ್ತಡಕ್ಕೆ ಪೊಲೀಸ್ರ ಸತೀಶ್‌ನ ಅರೆಸ್ಟ್ ಮಾಡ್ತಿಲ್ಲ ಎಂದು ಹೇಳಲಾಗ್ತಿದೆ.

Edited By : Shivu K
PublicNext

PublicNext

30/12/2024 09:26 pm

Cinque Terre

60.33 K

Cinque Terre

2

ಸಂಬಂಧಿತ ಸುದ್ದಿ