ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ: ಜಿಲ್ಲಾಡಳಿತ ಕರೆದಿದ್ದ ಸರ್ವಜನಾಂಗಗಳ ಶಾಂತಿ ಸಭೆ ವಿಫಲ, ನಿರ್ಧಾರಕ್ಕೆ 5 ದಿನಗಳ ಗಡುವು

ಮಡಿಕೇರಿ: ಸಾಂಪ್ರದಾಯಿಕ ಉಡುಗೆ ತೊಟ್ಟು ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನಕ್ಕೆ ಬರದಂತೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸರ್ವಜನಾಂಗಗಳ ಶಾಂತಿ‌ ಸಭೆ ಕರೆಯಲಾಗಿದ್ದು, ಕೊನೆಗೂ ಶಾಂತಿ ಸಭೆ ವಿಫಲಗೊಂಡಿದೆ. ಸಭೆಯಲ್ಲಿ ಸಮುದಾಯಗಳ ಪ್ರಮುಖರು ಇದ್ರೂ ಕೂಡ ಯಾವುದೇ ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ಕೊಡವ ಸಮಾಜ, ಗೌಡ ಸಮಾಜ, ಹಾಗೂ ದೇವಾಲಯ ಸಮಿತಿಯ ಪ್ರಮುಖರನ್ನ ಕರೆಸಿ ಶಾಂತಿ ಸಭೆ ಕರೆಯಲಾಗಿದ್ದು ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಮುಂದಿನ 5 ದಿನಗಳಲ್ಲಿ‌ ದೇವಾಲಯ ಆಡಳಿತ ಮಂಡಳಿ ತಮ್ಮ ನಿರ್ಧಾರ ತಿಳಿಸುವಂತೆ ಜಿಲ್ಲಾಡಳಿತ ದೇವಾಲಯ ಆಡಳಿತ ಮಂಡಳಿಗೆ ಸೂಚನೆ ನೀಡಿದೆ. ಅಲ್ಲಿಯವರೆಗೆ ದೇವಾಲಯದ ಯಾವುದೇ ನಿತ್ಯ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಿದ್ದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನೂ ಜ.2 ರವರೆಗೆ BNS 163 ಜಾರಿಯಿದ್ದು ಪರಿಸ್ಥಿತಿ ಬಿಗಡಾಯಿಸಿದಲ್ಲಿ ಮುಂದುವರಿಸಲಾಗುವುದು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಅವಹೇಳನಕಾರಿ ಪೋಸ್ಟ್ ಗಳು ಹಾಗೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಳವಣಿಗೆಗಳು ನಡೆದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.

Edited By : Nagesh Gaonkar
PublicNext

PublicNext

30/12/2024 08:33 pm

Cinque Terre

55.88 K

Cinque Terre

0

ಸಂಬಂಧಿತ ಸುದ್ದಿ