ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗಿನ ಕಟ್ಟೆಮಾಡುವಿನಲ್ಲಿ ಎನ್ ಬಿಎಸ್ 163 ಅಡಿ ನಿಷೇಧಾಜ್ಞೆ ಜಾರಿ

ಮಡಿಕೇರಿ: ಕೊಡಗು ಜಿಲ್ಲೆ ಕಟ್ಟೆಮಾಡುವಿನ ಮೃತ್ಯುಂಜಯ ದೇವಾಲಯಕ್ಕೆ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಸ್ಥಾನಕ್ಕೆ ಬರದಂತೆ ನಿರ್ಬಂಧ ಹಿನ್ನೆಲೆ ಕೊಡವ ಮತ್ತು ಅರೆಭಾಷೆ ಗೌಡ ಸಮುದಾಯಗಳ ನಡುವೆ ಗಲಾಟೆ ಸಂಭವಿಸಿದ್ದು ಮಾರಾ ಮಾರಿ ನಡೆದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ‌‌‌. ಜೊತೆಗೆ ಸ್ಥಳದಲ್ಲಿ ಎರಡು ಸಮುದಾಯಗಳ ನಡುವೆ ಗಲಭೆ ಎದ್ದಿದ್ದು ದೇವಾಲಯದ ಸಮೀಪ‌ ಹೆಚ್ಚಿನ ಜನ ಸೇರುವ ನಿರೀಕ್ಷೆ ಇತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಎನ್ ಬಿಎಸ್ 163ರ ಅಡಿ ನಿಷೇಧಾಜ್ಞೆ ಜಾರಿ ಮಾಡಿದೆ.

ಸ್ಥಳದಲ್ಲಿ 300ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲು ಹಾಕಲಾಗಿದೆ. ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ಹಾಕಲಾಗಿದೆ‌. ಇಂದು ಬೆಳಿಗ್ಗೆ 6 ಗಂಟೆಯಿಂದ ಜ. 2 ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿದೆ. ಕಟ್ಟೆಮಾಡಿನ ಮೃತ್ಯುಂಜಯ ದೇವಾಲಯಕ್ಕೆ ಕೊಡಗು ಎಸ್ಪಿ ರಾಮರಾಜನ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ವಹಿಸಲಾಗಿದೆ. ಕೊಡಗು ಮಾತ್ರವಲ್ಲದೇ ಹಾಸನ, ಮೈಸೂರಿನಿಂದ ಹೆಚ್ಚುವರಿಯಾಗಿ KSRP ‌ತುಕಡಿಯನ್ನ ನಿಯೋಜಿಸಲಾಗಿದೆ‌.

Edited By : Shivu K
PublicNext

PublicNext

30/12/2024 06:55 pm

Cinque Terre

39.09 K

Cinque Terre

0

ಸಂಬಂಧಿತ ಸುದ್ದಿ