ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು

ಮಂಗಳೂರು: ನಗರ ಹೊರವಲಯದ ಅಡ್ಯಾ‌ರ್ ಕಣ್ಣೂರು ಸಮೀಪ ರವಿವಾರ ಸಂಭವಿಸಿರುವ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ಅಡ್ಯಾ‌ರ್ ಕಟ್ಟೆ ನಿವಾಸಿ ಅಬೂಬಕ‌ರ್ ಸಿದ್ದೀಕ್(36) ಮೃತ ಯುವಕ.

ಅಬೂಬಕ‌ರ್ ಸಿದ್ದೀಕ್ ತೊಕ್ಕೊಟ್ಟು ಸಮೀಪದ ಕಲ್ಲಾಪು ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದರು‌. ಇವರು ರವಿವಾರ ಬೆಳಗ್ಗೆ ಮನೆಯಿಂದ ಕಲ್ಲಾಪು ಮಾರ್ಕೆಟ್‌ಗೆ ಟೆಂಪೋದಲ್ಲಿ ಹೊರಟಿದ್ದರು. ಆದರೆ ಅಡ್ಯಾ‌ರ್ ಕಣ್ಣೂರು ತಲುಪುತ್ತಿದ್ದಂತೆಯೇ ಟೆಂಪೋದಲ್ಲಿದ್ದ ಟ್ರೇಯೊಂದು ಕೆಳಗೆ ಬಿತ್ತು ಎನ್ನಲಾಗಿದೆ. ಆದ್ದರಿಂದ ಟೆಂಪೋ ನಿಲ್ಲಿಸಿ ಅದನ್ನು ತೆಗೆಯಲು ಮುಂದಾಗುತ್ತಿದ್ದಂತೆಯೇ ದ್ವಿಚಕ್ರ ವಾಹನವೊಂದು ಅವರಿಗೆ ಢಿಕ್ಕಿ ಹೊಡೆದಿದೆ.

ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದೀಕ್‌ರನ್ನು ತಕ್ಷಣವೇ ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Edited By : Nagaraj Tulugeri
Kshetra Samachara

Kshetra Samachara

30/12/2024 08:19 pm

Cinque Terre

11.06 K

Cinque Terre

4

ಸಂಬಂಧಿತ ಸುದ್ದಿ