ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 'ಅಸ್ಮಿತೆ' ವ್ಯಾಪಾರ ಮೇಳದಲ್ಲಿ 4 ದಿನದಲ್ಲಿ 1 ಕೋಟಿಗೂ ಅಧಿಕ ಮಾರಾಟ - ಶಾಸಕ ರಾಜು ಸೇಠ್

ಬೆಳಗಾವಿ: ಬೆಳಗಾವಿಯಲ್ಲಿ ಸರಸ್ ಮೇಳವು ಕೇವಲ 4 ದಿನದಲ್ಲಿ 1 ಕೋಟಿ 4 ಲಕ್ಷ ಮೌಲ್ಯದ ಉತ್ಪನ್ನಗಳು ಮಾರಾಟ ಮಾಡಿದೆ. ಇದರಲ್ಲಿ ಬೆಳಗಾವಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಖಾದಿ ಉತ್ಪನ್ನಗಳ ಮತ್ತು ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ ನೀಡಬೇಕೆಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇರ್ ಕರೆ ನೀಡಿದರು.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನನದ ಶತಮಾನೋತ್ಸವ ಆಚರಣೆ ಹಿನ್ನೆಲೆ ಖಾದಿ ಉತ್ಪನ್ನಗಳಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ ನೀಡಿ ಅವರ ವಿಶ್ವಾಸವನ್ನು ಹೆಚ್ಚಿಸಿ ಮಾರಾಟವನ್ನು ಹೆಚ್ಚಿಸಲು ಸರ್ಕಾರ ಬೆಳಗಾವಿ ನಗರದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ 'ಅಸ್ಮಿತೆ' ವ್ಯಾಪಾರ ಮೇಳ-2024ವನ್ನು ಉದ್ಘಾಟಿಸಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಸರಸ್ ಮೇಳ ಮತ್ತು ಖಾದಿ ಉತ್ಸವವು ಡಿ.26ರಿಂದ ಆಯೋಜಿಸಿದ್ದು, ಜನವರಿ 04ರವರೆಗೆ ನಡೆಯಲಿದೆ.

ಖಾದಿ ವಸ್ತು ಪ್ರದರ್ಶನ ಹಾಗೂ ಅಸ್ಮಿತೆಯಲ್ಲಿ ವಿವಿಧ ರಾಜ್ಯಗಳಿಂದ 150 ಸ್ವಸಹಾಯ ಸಂಘಗಳು ಮತ್ತು 50 ಖಾದಿ 200 ಮಳಿಗೆಗಳು ಭಾಗವಹಿಸಿವೆ. ಕೇವಲ 4 ದಿನದಲ್ಲಿ 1 ಕೋಟಿ 4 ಲಕ್ಷ ಮೌಲ್ಯದ ಉತ್ಪನ್ನಗಳು ಮಾರಾಟವಾಗಿವೆ. ಅತ್ಯುತ್ತಮ ಗುಣಮಟ್ಟದ ಖಾದಿ ಇಲ್ಲಿ ಮಾರಾಟಕ್ಕಿದೆ. ಸ್ವಸಹಾಯ ಸಂಘಗಳ ಮನೆಯಲ್ಲಿ ಮಾಡಿದ ವಸ್ತುಗಳು ಅತ್ಯಂತ ಚೆನ್ನಾಗಿವೆ. ಅಲ್ಲದೇ ಈ ಪ್ರದರ್ಶನದಲ್ಲಿ ಭಾಗವಹಿಸಿದ ಉತ್ಪಾದಕರಿಗೆ ಆನಲೈನಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದರು. ಇವರಿಗೆ ಜಾಹೀರಾತು ನೀಡಿದರೇ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕೆಂದರು.

Edited By : Nagesh Gaonkar
PublicNext

PublicNext

30/12/2024 08:09 pm

Cinque Terre

22.27 K

Cinque Terre

0

ಸಂಬಂಧಿತ ಸುದ್ದಿ