ಬೆಳಗಾವಿ: ಖಾದಿ ವಸ್ತು ಪ್ರದರ್ಶನ ಹಾಗೂ ಅಸ್ಮಿತೆಯಲ್ಲಿ ವಿವಿಧ ರಾಜ್ಯಗಳಿಂದ 150 ಸ್ವಸಹಾಯ ಸಂಘಗಳು ಮತ್ತು 50 ಖಾದಿ 200 ಮಳಿಗೆಗಳು ಭಾಗವಹಿಸಿವೆ. ಕೇವಲ 4 ದಿನದಲ್ಲಿ 1 ಕೋಟಿ 4 ಲಕ್ಷ ಮೌಲ್ಯದ ಉತ್ಪನ್ನಗಳು ಮಾರಾಟವಾಗಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದರು.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ 1 ಕೋಟಿ 30 ಲಕ್ಷ 10 ದಿನದಲ್ಲಿ ಮಾರಾಟವಾಗಿತ್ತು. ಈ ಬಾರಿಯೂ ಅತ್ಯಂತ ಒಳ್ಳೆಯ ವಸ್ತುಗಳು ಪ್ರದರ್ಶನದಲ್ಲಿ ಲಭ್ಯಯಿವೆ. ಅಕ್ಕ ಕೆಫೆ ಇನ್ನುಳಿದವರು ಒಂದೇ ದಿನದಲ್ಲಿ 1 ಲಕ್ಷ ರೂಪಾಯಿ ಮಾರಾಟ ಮಾಡಲಾಗಿದೆ. ಶೇ. 30 ರಷ್ಟು ರಿಯಾಯಿತಿ ಇದೆ. ಸ್ವಸಹಾಯ ಸಂಘಗಳ ಈ ಪ್ರದರ್ಶನಕ್ಕೆ ಭೇಟಿ ನೀಡಿ ಪ್ರೋತ್ಸಾಹ ನೀಡಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಶೋಕಾಚರಣೆ ಜಾರಿಯಲ್ಲಿದ್ದು, 10 ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಜ.2 ಮತ್ತು ಜ.3 ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
ಇನ್ನು ಏರ್ ಪೋರ್ಟ್ ಮತ್ತು ರೈಲ್ವೆ ನಿಲ್ದಾಣದ ಹತ್ತಿರ ಮಾರಾಟ ಮಳಿಗೆಯನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ ಬಸ್ ಸ್ಟ್ಯಾಂಡಿನಲ್ಲಿಯೂ ಆರಂಭಿಸಲಾಗುವುದು. ಅಕ್ಕಾ ಕೆಫೆಯನ್ನು ಬಸ್ ಸ್ಟ್ಯಾಂಡಿನಲ್ಲಿಯೂ ಆರಂಭಿಸುವ ಯೋಚನೆಯಲ್ಲಿದ್ದೇವೆ ಎಂದರು.
PublicNext
30/12/2024 06:35 pm