ಮುಲ್ಕಿ: ಗೇರುಕಟ್ಟೆ ಒಂಬತ್ತು ಮಾಗಣೆ ಮುಂಡಾಳ ಶಿವ ಸಮಾಜ ಸೇವಾ ಸಂಘದ ವತಿಯಿಂದ ಸಂಘದ ಸಭಾಭವನದಲ್ಲಿ ಮುಂಡಾಳ ಸಮುದಾಯದ ವಧುವರ ಅನ್ವೇಷಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಒಂಬತ್ತು ಮಾಗಣೆ ಮುಂಡಾಳ ಶಿವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಚ್ಚಿದಾನಂದ ಉದ್ಘಾಟಿಸಿ ಮಾತನಾಡಿ ಸಮುದಾಯದ ಹೆಣ್ಣು ಮಕ್ಕಳ ಮದುವೆ ವಿಳಂಬವಾಗುತ್ತಿರುವುದು ಕಳವಳಕಾರಿಯಾಗಿದೆ ಇದರ ಸದುಪಯೋಗವನ್ನು ಸಮುದಾಯದ ಜನತೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ದೇವಪ್ಪ, ಸುಕುಮಾರ್, ಚಂದ್ರಶೇಖರ್, ಭಾಸ್ಕರ್ ಮಾಬಿನ್ ಶ್ರೀಧರ್ ಪಕ್ಷಿಕೆರೆ, ಪ್ರೀತಿ ಲತಾ , ಗುರಿಕಾರರಾದ ದೇವಪ್ಪ ಮುಂತಾದವರು ಭಾಗವಹಿಸಿದ್ದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಸನ ಮುಂತಾದ ಕಡೆಯಿಂದ ಬಂದಂತಹ ಸಮುದಾಯದ ಆಸಕ್ತ ವದು ವರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Kshetra Samachara
29/12/2024 07:29 pm