ಉಡುಪಿ: ಹಳೆಯ ವರ್ಷದ ಕೊನೆಯ ದಿನ, ಹೊಸ ವರ್ಷದ ಮೊದಲ ದಿನಕ್ಕೆ ಜಗತ್ತು ಸಜ್ಜಾಗಿದೆ. ಹೊಸ ವರ್ಷಕ್ಕೆ "ಚಿಯರ್ಸ್" ಹೇಳಲು ಜನರು ಸಜ್ಜಾಗಿದ್ದಾರೆ. ಇದರ ಪರಿಣಾಮವಾಗಿ ಕೃಷ್ಣನಗರಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ....
ಕೆಲವರಿಗೆ ಕಡಲ ಕಿನಾರೆಯಲ್ಲಿ ಸೂರ್ಯೋದಯ ನೋಡುತ್ತಾ ಹೊಸ ವರ್ಷವನ್ನು ಸ್ವಾಗತಿಸುವ ಆಸೆಯಾದರೆ ,ಇನ್ನೂ ಹಲವರು ಬೀಚ್ ದಂಡೆಗಳಲ್ಲಿ ರೆಸಾರ್ಟ್ ಬುಕ್ ಮಾಡಿದ್ದಾರೆ. ಇನ್ನು ಕುಟುಂಬ ಸಮೇತ ಎಂಜಾಯ್ ಮಾಡುವವರಿಗೆ ಇಲ್ಲಿ ಯಥೇಚ್ಛ ದೇವಸ್ಥಾನಗಳಿವೆ. ಯುವಕ ಯುವತಿಯರು ಸೈಂಟ್ ಮೇರೀಸ್ ದ್ವೀಪ ,ಮತ್ತು ಖಾಸಗಿತನ ಇರುವ ಸ್ಥಳಗಳನ್ನು ಆಯ್ಕೆ ಮಾಡಿದ್ದಾರೆ. ಒಟ್ಟಾರೆ ರಾಜ್ಯದ ಹಲವು ಜಿಲ್ಲೆಗಳ ಜನರಿಗೆ ಕೃಷ್ಣನಗರಿ ಹೊಸ ವರ್ಷಕ್ಕೆ ನೆಚ್ಚಿನ ತಾಣವಾಗಿದೆ.
ಉಡುಪಿಯ ಬಹುತೇಕ ಹೊಟೇಲು, ಲಾಡ್ಜಿಂಗ್ ಗಳು ಬುಕ್ ಆಗಿವೆ. ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಲೇ ಇದೆ.ಈಗಾಗಲೇ ಉಡುಪಿ ಮತ್ತು ಮಂಗಳೂರಿನತ್ತ ರಾಜ್ಯದ ಮೂಲೆಮೂಲೆಯ ಜನ ಹರಿದುಬರುತ್ತಲೇ ಇದ್ದಾರೆ. ಉಡುಪಿಯ ಕೃಷ್ಣಮಠ , ಕೊಲ್ಲೂರು ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಜನದಟ್ಟಣೆ ಇದೆ. ಇನ್ನು ಮಲ್ಪೆ ,ಮರವಂತೆ ,ಕಾಪು ಮತ್ತಿತರ ಬೀಚ್ ಗಳು ಜನರಿಂದ ತುಂಬಿವೆ. ಒಟ್ಟಾರೆ ಎಲ್ಲರಿಗೂ ಹೊಸ ವರ್ಷವನ್ನು ಸ್ಮರಣೀಯವಾಗಿ ಸ್ವಾಗತಿಸುವ ಕಾತರ....ಹುಮ್ಮಸ್ಸು.ಅಂದಹಾಗೆ ,ಹೊಸವರ್ಷವನ್ನು ನೀವು ಹೇಗೆ ಕಳೆಯಲು ಬಯಸುತ್ತೀರಿ?
PublicNext
31/12/2024 08:33 pm