ತುಮಕೂರು: ಕರಡಿಯೊಂದು ಅಗ್ನಿಶಾಮಕ ಠಾಣೆಗೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿದ ಪ್ರಸಂಗವು ಪಾವಗಡ ಪಟ್ಟಣದಲ್ಲಿ ನಡೆದಿದೆ.
ಬಳ್ಳಾರಿ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯ ಆವರಣದೊಳಗಡೆ ಎಂಟ್ರಿ ಕೊಟ್ಟ ಕರಡಿ ಸೃಷ್ಟಿಸಿದ ಅವಾಂತರಕ್ಕೆ ಠಾಣೆಯಲ್ಲಿ ಇದ್ದವರು ಹೈರಾಣಾಗಿ ಹೋಗಿದ್ದಾರೆ. ಒಂದು ಕಡೆ ಮಾತ್ರ ಕಾಂಪೌಂಡ್ ಹೊಂದಿರುವ ಅಗ್ನಿ ಶಾಮಕ ಠಾಣೆ, ಮತ್ತೊಂದು ಕಡೆ ಕಾಂಪೌಂಡ್ ಇಲ್ಲದಕ್ಕೆ ಏಕಾಏಕಿ ಕರಡಿ ನುಗ್ಗಿದೆ. ಪಾವಗಡ ಸಮೀಪದ ಬೆಟ್ಟಗಳಿಂದ ಸಂಜೆ ವೇಳೆಗೆ ಇಳಿಯುವ ಕರಡಿಗಳು ಸಂಜೆಯಾದರೆ ಸಾರ್ವಜನಿಕರು ಹಾಗೂ ಅಗ್ನಿ ಶಾಮಾಕ ಸಿಬ್ಬಂದಿ, ಜೊತೆಗೆ ಮಕ್ಕಳು, ಮಹಿಳೆಯರು, ಭಯ ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕ್ರಮ ವಹಿಸುವಂತೆ ಅರಣ್ಯ ಇಲಾಖೆಗೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ
PublicNext
29/12/2024 06:02 pm