ತುಮಕೂರು: ತಿಪಟೂರು ತಾಲೂಕಿನ ರಂಗಾಪುರ ಭಾಗದಲ್ಲಿ ಹಲವು ತಿಂಗಳುಗಳಿಂದ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಮೂಡಿಸಿದ್ದ 5 ವರ್ಷ ಪ್ರಾಯದ ಗಂಡು ಚಿರತೆಯ ಬಾಲ ಹಿಡಿದು ಬೋನಿಗೆ ಎಳೆದು ಹಾಕಿದ್ದ ಗ್ರಾಮದ ಆನಂದ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಪುರಲೇಹಳ್ಳಿ ರಸ್ತೆಯ ಕುಮಾರ್ ಎಂಬುವರ ತೋಟದಲ್ಲಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ದಂಡು, ದಾಳಿಯೊಂದಿಗೆ ಸಕಲ ಸಲಕರಣೆಯೊಂದಿಗೆ ಬಂದಿದ್ದರೂ ಚಿರತೆ ಸೆರೆ ಹಿಡಿಯಲು ವಿಫಲರಾಗಿದ್ರು.
ಕೈಗೆ ಸಿಕ್ಕಿದ ಚಿರತೆಯನ್ನು ಬಲೆ ಬೀಸಿ ಹಿಡಿಯಲಾರದೆ ಕೈಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯವೈಖರಿಗೆ ಸಿಟ್ಟಾದ ಸ್ಥಳಿಯರೇ ಗುಂಪುಕಟ್ಟಿಕೊಂಡು ಚಿರತೆಯ ಹಿಂದೋಡಿದರು. ನಿತ್ರಾಣಗೊಂಡಿದ್ದ ಚಿರತೆ ಎಂದಿನ ವೇಗದಲ್ಲಿ ಓಡಲಾರದೆ ನಿಧಾನವಾಗಿ ಹೋಗುತ್ತಿದ್ದರಿಂದ ಯುವಕರೇ ಹಿಡಿದು ಬೋನಿಗಟ್ಟಲು ಸಾಧ್ಯವಾಗಿದೆ.
ಚಿರತೆಯನ್ನು ಹಿಡಿಯುವ ಪಣದಿಂದ ಹಿಮ್ಮೆಟ್ಟಿಸುತ್ತಿದ್ದ ಸ್ಥಳೀಯ ಯುವಕರ ಗುಂಪಿನಲ್ಲಿದ್ದ ಆನಂದ್ ಎಂಬುವವರು ಧೈರ್ಯದಿಂದ ಚಿರತೆಯ ಬಾ
PublicNext
07/01/2025 11:54 am