ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ - 179 ಜನ ಸಾವು!

ದಕ್ಷಿಣ ಕೊರಿಯಾ: ವಿಮಾನ ಲ್ಯಾಂಡ್ ಆಗುವ ವೇಳೆ ಪತನಗೊಂಡ ಪರಿಣಾಮ ವಿಮಾನದಲ್ಲಿ 181 ಜನರ ಪೈಕಿ 179 ಜನ ಮೃತಪಟ್ಟಿದ್ದಾರೆ. ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ಈ ಘಟನೆ ನಡೆದಿದೆ.

ಲ್ಯಾಂಡಿಂಗ್ ಆಗುವ ವೇಳೆ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡು ಮುಂದಿನ ತಡೆಗೋಡೆಗೆ ಡಿಕ್ಕಿಯಾಗಿದೆ. ಪರಿಣಾಮ ವಿಮಾನ ಬೆಂಕಿ ಹೊತ್ತಿಕೊಂಡಿದೆ. ದುರಂತದಲ್ಲಿ 179 ಜನ ಮೃತಪಟ್ಟಿದ್ದಾರೆ. ಜೆಜು ಏರ್ ವಿಮಾನ ಇದಾಗಿದ್ದು ಥೈಲ್ಯಾಂಡ್‌ನಿಂದ ಹಿಂದಿರುಗುತ್ತಿತ್ತು. ವಿಮಾನ ನಿಲ್ದಾಣದಲ್ಲಿ ಬೆಂಕಿ ನಂದಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

29/12/2024 11:22 am

Cinque Terre

146.64 K

Cinque Terre

4

ಸಂಬಂಧಿತ ಸುದ್ದಿ