ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಸೇನಾಧಿಕಾರಿ ಮೇಲೆ ಪುಂಡರಿಂದ ಹಲ್ಲೆ - ಅಸಹಾಯಕನಾದ ಪೊಲೀಸ್ ಅಧಿಕಾರಿ

ತಿರುವನಂತಪುರಂ: ಕರ್ತವ್ಯನಿರತ ಸೇನಾಧಿಕಾರಿ ಮೇಲೆ ಇಬ್ಬರು ಪುಂಡರು ಸೇರಿ ಹಲ್ಲೆ ಮಾಡಿದ್ದಾರೆ. ಕೇರಳದ ತ್ರಿಕ್ಕಕ್ಕರ ಎಂಬಲ್ಲಿ ಈ ಘಟನೆ ಡಿಸೆಂಬರ್ 23ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಎನ್‌ಸಿಸಿ ತರಬೇತಿ ಶಿಬಿರದಲ್ಲಿ ಕೆಡೆಟ್‌ಗಳಿಗೆ ದೋಷಪೂರಿತ ಆಹಾರ ನೀಡಲಾಗಿದೆ. ಇದರಿಂದ ಕೆಡೆಟ್‌ಗಳ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ದೂರು ಬಂದಿತ್ತು. ಈ ಹಿನ್ನೆಲೆ ಸೇನಾಧಿಕಾರಿ ಶಿಬಿರ ನಡೆಯುತ್ತಿದ್ದ ಕೆಎಂಎಂ ಕಾಲೇಜ್‌ಗೆ ಹೋಗಿ ವಿಚಾರಿಸಿದ್ದಾರೆ. ಆಗ ಅಲ್ಲಿಗೆ ಬಂದ ಸ್ಥಳೀಯ ವಿದ್ಯಾರ್ಥಿ ಮುಖಂಡರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By : Nagaraj Tulugeri
PublicNext

PublicNext

30/12/2024 08:39 pm

Cinque Terre

90.58 K

Cinque Terre

2