ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಯನ್ನು ಭೇಟಿಯಾಗಲು ಅಕ್ರಮವಾಗಿ ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟ ಉತ್ತರ ಪ್ರದೇಶ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪಾಕ್-ಭಾರತದ ಗಡಿ ದಾಟಿದ 30 ವರ್ಷದ ವ್ಯಕ್ತಿಯು ಉತ್ತರ ಪ್ರದೇಶದ ಅಲಿಗಢ ನಿವಾಸಿಯಾಗಿದ್ದಾನೆ. ತಾನು ಮಹಿಳೆಯೊಂದಿಗೆ ಪ್ರಣಯ ಸಂಬಂಧವನ್ನು ಬೆಳೆಸಿದ್ದೇನೆ. ಆದ್ದರಿಂದ ಆಕೆಯನ್ನು ಭೇಟಿಯಾಗಲು ಮಾನ್ಯ ವೀಸಾ ಅಥವಾ ಪ್ರಯಾಣದ ದಾಖಲೆಗಳಿಲ್ಲದೆ ದೇಶವನ್ನು ಪ್ರವೇಶಿಸಿದ್ದೇನೆ ಎಂದು ವ್ಯಕ್ತಿಯು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ.
PublicNext
31/12/2024 11:03 pm