ಬೆಂಗಳೂರು: ತುಮಕೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಬಳಿ ಡಿಸೆಂಬರ್ 22ರಂದು ಭೀಕರ ಅಪಘಾತ ಸಂಭವಿಸಿತ್ತು. ಪರಿಣಾಮ ಚಂದ್ರಮ್ ಏಗಪ್ಪಗೋಳ ಅವರ ಇಡೀ ಕುಟುಂಬ ಸ್ಥಳದಲ್ಲೇ ಸಾವನ್ನಪ್ಪಿತ್ತು. ವೋಲ್ವೋ ಕಾರ್ ಮೇಲೆ ಕಂಟೇನರ್ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿತ್ತು. ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದರಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದ ಚಂದ್ರಮ್ ಅವರ ತಂದೆ ಈರಗೊಂಡ ಏಗಪ್ಪಗೊಳ ಮೃತಪಟ್ಟಿದ್ದಾರೆ.
ಮೃತ ಚಂದ್ರಮ್ ತಂದೆ ಈರಗೊಂಡ ಏಗಪ್ಪಗೊಳ ತನ್ನ ಮಕ್ಕಳು, ಮೊಮ್ಮಕ್ಕಳ ಸಾವಿನ ಬಳಿಕ ತೀವ್ರವಾಗಿ ಆಘಾತಗೊಂಡಿದ್ದು 80 ವರ್ಷದ ಈರಗೊಂಡ ಏಗಪ್ಪಗೊಳ ಅವರು ರವಿವಾರ ಸಂಜೆ ಮೃತಪಟ್ಟಿದ್ದಾರೆ. ಚಂದ್ರಮ್ ಅವರ ಪತ್ನಿ ಗೌರಾಬಾಯಿ, ಮಕ್ಕಳಾದ ದೀಕ್ಷಾ, ಧ್ಯಾನ್, ತಂಗಿಯಾದ ವಿಜಯಲಕ್ಷ್ಮಿ ಹಾಗೂ ಆಕೆಯ 6 ವರ್ಷದ ಪುತ್ರಿ ಆರ್ಯಾ ಸಾವು ಕಂಟೇನರ್ ಅಡಿ ಸಿಲುಕಿ ಮೃತಪಟ್ಟಿದ್ದರು. ಈ ದಾರುಣ ಘಟನೆಗೆ ಕರ್ನಾಟಕ ಸೇರಿದಂತೆ ದೇಶವೇ ಕಂಬನಿ ಮಿಡಿದಿತ್ತು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿಯಲ್ಲಿ ಈರಗೊಂಡ ಏಗಪ್ಪಗೊಳ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಸಾವಿನ ಬಳಿಕ ಈರಗೊಂಡ ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅದಲ್ಲದೆ, ದೀರ್ಘಕಾಲದ ಅನಾರೋಗ್ಯ ಕೂಡ ಅವರನ್ನು ಮಾನಸಿವಾಗಿ ಕುಗ್ಗಿಸಿದ್ದು ಪರಿಣಾಮ ಅವರು ಮೃತಪಟ್ಟಿದ್ದಾರೆ.
PublicNext
29/12/2024 07:44 am