ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ : ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸಿ ಪರಾರಿಯಾದ ಕಳ್ಳ

ಕಾರ್ಕಳ: ಖರೀದಿ ನೆಪದಲ್ಲಿ ಜ್ಯುವೆಲ್ಲರಿಗೆ ಬಂದ ಕಳ್ಳನೋರ್ವ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆವಕಾರ್ಕಳ ನಗರದ ರಥಬೀದಿಯ ಎಸ್ ಜೆ‌ ಅರ್ಕೆಡ್ ಬಳಿ‌ ನಡೆದಿದೆ.

ಚಿನ್ನದ ಸರ ಖರೀದಿಗಾಗಿ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನಿಗೆ ಅಲ್ಲಿದ್ದ ಮಹಿಳಾ ಸಿಬ್ಬಂದಿ ಚಿನ್ನದ ಸರಗಳನ್ನು ತೋರಿಸುತ್ತಿದ್ದರು. ಇದೇ ವೇಳೆ ಕಳ್ಳ ,ಕೈಗೆ ಸಿಕ್ಕ ಸರವನ್ನು ಎಳೆದು ಪರಾರಿಯಾಗಿದ್ದಾನೆ. ಕಳ್ಳತನವಾದ ಕರಿಮಣಿ ಸರ ಸುಮಾರು 30 ಗ್ರಾಂ ಚಿನ್ನದ್ದು ಎನ್ನಲಾಗಿದೆ.ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾರ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.

Edited By : Manjunath H D
PublicNext

PublicNext

28/12/2024 09:43 am

Cinque Terre

43.89 K

Cinque Terre

0

ಸಂಬಂಧಿತ ಸುದ್ದಿ