ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಾಪತ್ತೆಯಾಗಿದ್ದ ಯುವಕ ಮರವೂರು ನದಿಯಲ್ಲಿ ಮೃತದೇಹವಾಗಿ ಪತ್ತೆ

ಮಂಗಳೂರು: ನಾಪತ್ತೆಯಾಗಿದ್ದ ಯುವಕನೋರ್ವನು ನಗರದ ಮರವೂರು ಸೇತುವೆ ಬಳಿಯ ಗುರುಪುರ ನದಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾನೆ.

ಮೂಡುಶೆಡ್ಡೆ ನಿವಾಸಿ ಸೂರ್ಯ (24) ಎಂಬಾತ ಮೃತಪಟ್ಟ ಯುವಕ.

ಡಿಸೆಂಬರ್ 25ರಂದು ಸೂರ್ಯ ಏಕಾಏಕಿ ನಾಪತ್ತೆಯಾಗಿದ್ದ. ಆ ಬಳಿಕ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ಆತ ಮರವೂರು ಸೇತುವೆ ಬಳಿಯ ಗುರುಪುರ ನದಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾನೆ.

"RPC" ಎಂಬ ಆ್ಯಪ್‌ನಲ್ಲಿ ಕೇವಲ ವೀಡಿಯೋಗಳನ್ನು ನೋಡುವ ಮೂಲಕ ಹಣ ಸಂಪಾದಿಸಬಹುದು ಎಂಬ ವಿಚಾರ ಕೆಲ ತಿಂಗಳಿಂದ ಇತ್ತೀಚೆಗೆ ದ.ಕ.ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿತ್ತು. ಮೂಲಗಳ ಪ್ರಕಾರ ಸೂರ್ಯನೂ ಸುಮಾರು 70 ಸಾವಿರಕ್ಕೂ ಅಧಿಕ ಹಣವನ್ನು ಸಾಲ ಪಡೆದು RPC ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದ. ಸದ್ಯ ಈ ಕಂಪೆನಿ ಫ್ರಾಡ್ ಎಂದು ತಿಳಿದಾಗ ಸಾಲದ ಸುಳಿಗೆ ಬಿದ್ದಿದೇನೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೆಯವರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Edited By : Abhishek Kamoji
Kshetra Samachara

Kshetra Samachara

27/12/2024 10:00 pm

Cinque Terre

9.86 K

Cinque Terre

0

ಸಂಬಂಧಿತ ಸುದ್ದಿ