ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ವ್ಯಕ್ತಿಯನ್ನು ಬೆದರಿಸಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 8 ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು !

ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಶಿವಾನಂದ ವಿ. ಪದ್ಮಶಾಲಿ ಅವರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ ಸೈಬರ್ ಕಳ್ಳರು ಲಕ್ಷಾಂತರ ರೂ. ವಂಚಿಸಿದ ಬಗ್ಗೆ ದೂರು ದಾಖಲಾಗಿದೆ.

ಅಪರಿಚಿತ ವ್ಯಕ್ತಿಯು ಮುಂಬಯಿ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಮೇಲೆ ಕೇಸು ದಾಖಲಾಗಿದೆ ಎಂದು ಬೆದರಿಸಿದ್ದಾನೆ. 30 ಲಕ್ಷ ರೂ. ಹಣವನ್ನು ನೀವು ಬೇರೆ ಬೇರೆ ಅಕೌಂಟ್ ನಲ್ಲಿ ಮೋಸ ಮಾಡಿದ್ದೀರಿ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿ ನಿಮ್ಮ ಅಕೌಂಟ್ ವೆರಿಫೈ ಆಗಬೇಕು. ಕೂಡಲೇ ಹಣ ವರ್ಗವಾಣೆ ಮಾಡಬೇಕು ಎಂದು ಹೆದರಿಸಿದ್ದಾನೆ.ಇದರಿಂದ ಭಯಭೀತರಾದ ಶಿವಾನಂದ ಅವರು ಡಿಸೆಂಬರ್ 13 ರಿಂದ 17ರವೆರೆಗೆ ವಿವಿಧ ಹಂತಗಳಲ್ಲಿ ಪವನ್ ಕುಮಾರ್ ಗುಜ್ಜರ್ ಖಾತೆಗೆ ಒಟ್ಟು 8.93 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ. ಕಾರ್ಕಳ ನಗರ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

01/01/2025 08:40 am

Cinque Terre

11.31 K

Cinque Terre

0