ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ: ಪಡುಬಿದ್ರಿಯಲ್ಲಿ ಮಟ್ಕಾ ದಾಳಿ, ಇಬ್ಬರು ಆರೋಪಿಗಳ ಬಂಧನ

ಪಡುಬಿದ್ರಿ: ಇಲ್ಲಿನ ಮಾರ್ಕೆಟ್‌ ಪ್ರದೇಶದ ತರಕಾರಿ ಅಂಗಡಿಯೊಂದರ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿಗಳನ್ನು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ನೇತೃತ್ವದ ತಂಡ ಇಂದು ಬಂಧಿಸಿದೆ.

ಚಂದ್ರ ಅವರಾಲು ಮಟ್ಟು ಹಾಗೂ ಮುರಳೀಧರ ಸಾಲ್ಯಾನ್‌ ಪಡಹಿತ್ಲು ಬಂಧಿತ ಆರೋಪಿಗಳು. ಬಂಧಿತರಿಂದ 1,,835 ರೂ. ನಗದು, ಮಟ್ಕಾ ಚೀಟಿಗಳು, ಟೇಬಲ್‌ ಹಾಗೂ ಎರಡು ಕುರ್ಚಿಗಳ ಸಹಿತ 2 ಮೊಬೈಲ್‌ ಮತ್ತಿತರ ಪರಿಕರಗಳನ್ನು ವಶಪಡಿಕೊಳ್ಳಲಾಗಿದೆ.

ಇವರಿಂದ ಹಣ ಸಂಗ್ರಹಿಸುತ್ತಿದ್ದ ನಿರ್ವಾಹಕ ಏಜೆಂಟ್‌ ಎರ್ಮಾಳಿನ ಮನೋಜ್‌ ಕೋಟ್ಯಾನ್‌ನನ್ನು ಪ್ರಕರಣದಲ್ಲಿ ಆರೋಪಿಯಾಗಿಸಿ ಮೂವರ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಂಧಿತ ಆರೊಪಿಗಳಿಬ್ಬರನ್ನೂ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

31/12/2024 09:39 pm

Cinque Terre

8.53 K

Cinque Terre

0