ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಇಬ್ಬರು ಅಣ್ಣ- ತಮ್ಮಂದಿರ ಕುಲುಮೆಯಲ್ಲಿ ಕಾದು ತಯಾರಾದ ಆಯುಧಕ್ಕೆ ಈಗ ಫುಲ್ ಡಿಮ್ಯಾಂಡ್.
ಹೌದು,, ಹೀಗೆ ಕುಲುಮೆಯಲ್ಲಿ ಕಾದು ಕೆಂಪಾಗಿರುವ ಕಬ್ಬಿಣಕ್ಕೆ ಪೆಟ್ಟು ನೀಡಿ ಆಯುಧ ತಯಾರಿಸುತ್ತಿರುವವರು ಒಂದೆಡೆಯಾದ್ರೆ, ತಮ್ಮ ಇಷ್ಟದ ಆಯುಧ ಖರೀದಿಗಾಗಿ ಎರಡು ದಿನಗಳ ಕಾಲ ಕಾದು ಕುಳಿತಿರೋ ರೈತರು. ಕಬ್ಬು ಕಟಾವಿಗೆ ಇವರ ಕೈಯಿಂದ ರೆಡಿಯಾದ ಕುಡುಗೋಲು ಬಹಳ ಜನಪ್ರಿಯತೆ ಗಳಿಸಿದೆ. ಇವರ ಆಯುಧ ಜನಪ್ರಿಯತೆಗೆ ಕರ್ನಾಟಕ- ಮಹಾರಾಷ್ಟ್ರ ದಿಂದಲೂ ರೈತರು ಬಂದು ಕೊಂಡುಕೊಳ್ಳುತ್ತಾರೆ.
ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದವರಾದ ಆನಂದ ಲೋಹಾರ ಹಾಗೂ ಗೋವಿಂದ ಲೋಹಾರ ಇಬ್ಬರು ಸಹೋದರರ ಕೈಕುಲುಮೆಗೆ ಇಲ್ಲಿಯ ರೈತರು ಫುಲ್ ಫಿದಾ ಆಗಿದ್ದಾರೆ. ಕೃಷಿ ಕಾಯಕಕ್ಕೆ ಬಳಕೆಯಾಗುವ ಕಬ್ಬಿಣ ಸಾಮಗ್ರಿಗಳನ್ನ ರೆಡಿ ಮಾಡುವುದನ್ನು ಕರಗತ ಮಾಡಿಕೊಂಡಿರುವ ಇವರು ನೆಚ್ಚಿನ ಆಯುಧ ತಯಾರಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.
ಇನ್ನು ಇವರ ಕೈಯಿಂದ ತಯಾರಾದ ಆಯುಧದ ವಿಶೇಷತೆ ಏನೆಂದರೆ ಇನ್ನುಳಿದ ಆಯುಧಗಳಂತೆ ಇದು ಬೇಗನೆ ತುಕ್ಕು ಹಿಡಿಯುವುದಾಗಲಿ, ಮುರಿದು ಹೋಗುವುದಾಗಲಿ ಆಗುವುದಿಲ್ಲ ಉತ್ತಮ ಬಾಳಿಕೆ ಹಾಗೂ ರೈತರ ಕೃಷಿ ಕಾಯಕಕ್ಕೆ ಯೋಗ್ಯವಾಗಿದೆ. ಒಂದು ಕುಡುಗೋಲು (ಆಯುಧ)800ರಿಂದ 9000 ರೂ (ಕುಡುಗೊಲು)ವರೆಗೂ ಮಾರಾಟ ಮಾಡುತ್ತಾರೆ.ಇವರಿಬ್ಬರೇ ಅಣ್ಣ ತಮ್ಮಂದಿರು ಈ ಕುಡುಗೋಲು ತಯಾರಿಕೆಯಿಂದ ವಾರ್ಷಿಕ 25 ರಿಂದ 26 ಲಕ್ಷ ಆದಾಯ ಗಳಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
PublicNext
26/12/2024 08:15 pm