ಅಥಣಿ: ರಾಜ್ಯದಲ್ಲಿ ಮುಂಗಾರು ಬೆಳೆ ಬಿತ್ತನೆ ಬಳಿಕ ಅತಿವೃಷ್ಟಿ, ಅನಾವೃಷ್ಟಿ ಹಿನ್ನೆಲೆ ರೈತರ ಬೆಳೆ ನಾಶವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಳೆ ಪರಿಹಾರ ಸಿಗದೇ ಅದೆಷ್ಟೋ ರೈತರು ಇನ್ನೂ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಇವುಗಳ ಮಧ್ಯೆ ಹಿಂಗಾರು ಬೆಳೆಗಳಿಗೆ ಕೀಟ ಬಾಧೆ ಕಾಡುತ್ತಿದ್ದು, ಬೆಳೆ ಸಂಪೂರ್ಣ ನಾಶವಾಗುವ ಹಂತಕ್ಕೆ ತಲುಪಿದೆ.
ತಾಲೂಕಿನ ಮದಭಾವಿ, ಅನಂತಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಹು ಗ್ರಾಮಗಳಲ್ಲಿ ಜೋಳ, ಹಾಗೂ ಕಡಲೆ ಸೇರಿದಂತೆ ಹಲವು ಬೆಳೆಗಳಿಗೆ ಕೀಟಬಾಧೆ ಕಾಡುತ್ತಿದ್ದು, ಬೆಳೆಗಳು ಮುಟುಕುಗೊಂಡಿವೆ. ಸಾವಿರಾರು ರೂ. ಖರ್ಚು ಮಾಡಿ ಬೆಳೆದ ಬೆಳೆಗಳು ನಾಶಗೊಂಡಿದ್ದು ಕೀಟಗಳ ಕಾಟದಿಂದ ರೈತರು ಹೈರಾಣಾಗಿದ್ದಾರೆ.
ಕಳೆದ ವರ್ಷ ಮಳೆ ವಿಳಂಬದಿಂದ ಬೆಳೆ ಇಳುವರಿ ಕುಂಠಿತವಾಗಿತ್ತು. ಆದ್ರೆ ಈ ವರ್ಷ ಪೂರಕ ಮಳೆಯಾಗಿದ್ದರೂ ಹಿಂಗಾರು ಬೆಳೆಗಳಿಗೆ ಕೀಟಗಳ ಕಾಟದಿಂದ ರೋಗ ಅಂಟಿಕೊಂಡು ರೈತರು ಬೆಳೆ ನಿರ್ವಹಣೆ ಮಾಡಲು ಕಷ್ಟ ಸಾಧ್ಯವಾಗಿದೆ. ಅಧಿಕಾರಿಗಳು ಕೂಡಲೇ ರೈತರ ಬೆಳೆ ವೀಕ್ಷಣೆ ಮಾಡಿ ಪರಿಹಾರ ಸೂಚಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
PublicNext
22/12/2024 01:27 pm