ಬಾಗಲಕೋಟೆ : ಹೇ...ವಿಧಿಯೇ ನೀನೆಷ್ಟು ಕ್ರೂರಿ...ಬಾಳಿ ಬದುಕಿ ಭಾರತಾಂಬೆಯ ಸೇವೆ ಮಾಡಲು ಬಂದ ಯೋಧರನ್ನು ಬಾರದ ಲೋಕಕ್ಕೆ ಕಳುಹಿಸಿದ ನಿನಗಿದೂ ಧಿಕ್ಕಾರ..ಧಿಕ್ಕಾರ..ಧಿಕ್ಕಾರ ಹೀಗೆ ಹೇಳಲು ಕಾರಣ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್‌ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ದುರಂತದಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ಮಾರಿಗೊಂಡ (25), ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬಿಜಾಡಿಯ ಯೋಧ ಅನೂಪ್, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಧರ್ಮರಾಜ ಸುಭಾಷ ಖೋತ ಸಾವಿಗೀಡಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ಮಾರಿಗೊಂಡ ಹಿಮಾಚಲ ಪ್ರದೇಶದಲ್ಲಿ ಪತ್ನಿಯೊಂದಿಗೆ ನೆಲೆಸಿದ್ರು ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಪತ್ನಿಯನ್ನು ವಾಪಸ್ ಮನೆಗೆ ಕಳುಹಿಸಿ ಕಾಶ್ಮೀರಕ್ಕೆ ಕರ್ತವ್ಯಕ್ಕೆ ತೆರಳಿದ ಯೋಧ ಬಾರದ ಲೋಕಕ್ಕ ಪ್ರಯಾಣಿಸಿದ್ದು ನಿಜಕ್ಕೂ ದುರಂತ.
ಯೋಧ ಮಹೇಶ್ ಕಾಶ್ಮೀರಕ್ಕೆ ತೆರಳಬೇಕಾದ ಹಿನ್ನಲೆಯಲ್ಲಿ ಮಡದಿಯನ್ನು ಇತ್ತ ಮನೆಗೆ ಕಳುಹಿಸಿದ್ದಾರೆ. ಮಡದಿ ಮನೆ ಸೇರುತ್ತಿದ್ದಂತೆ ಅತ್ತ ಪತಿ ಅಪಘಾತದಲ್ಲಿ ಇಹಲೋಕ ತೇಜಿಸಿದ ಸುದ್ದಿ ಪತ್ನಿಗೆ ಬರಸಿಡಿಲು ಬಡಿದಂತಾಗಿದೆ. ವಿಧಿಯ ಕ್ರೂರತನಕ್ಕೆ ಸುಂದರ ಸಂಸಾರವೊಂದು ಛೀದ್ರವಾಗಿದೆ.
ಯೋಧ ಮಹೇಶ್ ನಾಗಪ್ಪ ಮರಿಗೊಂಡ 11ನೇ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೆಂಡರ್ ಎಂಬ ಪ್ರದೇಶಕ್ಕೆ ಸೇನಾ ಟ್ರಕ್ನಲ್ಲಿ ಕರ್ತವ್ಯಕ್ಕೆ ಹೊರಟಿದ್ದರು. ಈ ವೇಳೆ ಪ್ರಪಾತಕ್ಕೆ ಬಿದ್ದು ದುರ್ಘಟನೆ ಸಂಭವಿಸಿದೆ. ಮಹೇಶ್ ಅವರು ಸೇನೆಗೆ ಸೇರಿ 6 ವರ್ಷ 6 ತಿಂಗಳು ಆಗಿತ್ತು. ಯೋಧನಿಗೆ ಓರ್ವ ತಮ್ಮ, ಓರ್ವ ತಂಗಿ ಹಾಗೂ ತಾಯಿ ಶಾರದಾ ಇದ್ದಾರೆ. ಲಕ್ಷ್ಮೀ ಎಂಬ ಯುವತಿ ಜತೆ ಮದುವೆಯಾಗಿ ಮೂರು ವರ್ಷ ಆಗಿತ್ತು. ಕುಟುಂಬಕ್ಕೆ ಮಹೇಶ್ ಹಿರಿಯ ಪುತ್ರರಾಗಿದ್ದರು. ಯೋಧನ ಪಾರ್ಥೀವ ಶರೀರ ಇಂದು ಬೆಳಗಾವಿ ಮೂಲಕ ಮನೆ ತಲುಪಿದೆ.
ಇನ್ನೂ ಯೋಧನ ಸಾವಿಗೆ ಸಿಎಂ ಸೇರಿದಂತೆ ಶಾಸಕ ಸಿದ್ದು ಸವದಿ ಸಾಂತ್ವನ ಹೇಳಿದ್ದಾರೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ಭಗವಂತ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ. ಇಂದು ಸಂಜೆ ಸರ್ಕಾರಿ ಗೌರವದೊಂದಿಗೆ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿ, ಅಂತ್ಯಕ್ರಿಯೆ ನೆರವೇರಲಿದೆ..
PublicNext
26/12/2024 05:43 pm