ನ್ಯೂಯಾರ್ಕ್: ಜಗತ್ತಿನ ದೈತ್ಯ ಆನ್‌ಲೈನ್ ಮಾರ್ಕೆಟಿಂಗ್ ಸಂಸ್ಥೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ತಮ್ಮ ಬಹುಕಾಲದ ಗೆಳತಿ ಲಾರೆನ್ ಸಂಚೆಜ್ ಜೊತೆಗೆ 2023ರ ಮೇ ತಿಂಗಳಲ್ಲಿ ಎಂಗೇಜ್ ಆಗಿದ್ದರು. ಈಗ ಇದೇ ಡಿಸೆಂಬರ್ 28ರಂದು ಅವರ ಮದುಗೆ ಸೆಟ್ಟೇರಿದೆ.
ಅಮೆರಿಕದ ಆಸ್ಪೆನ್‌ನಲ್ಲಿ ಜೆಫ್ ಮದುವೆ ನಡೆಯಲಿದೆ. ಮದುವೆಗೆ 600 ಮಿಲಿಯನ್ ಅಂದ್ರೆ 5 ಸಾವಿರ ಕೋಟಿ ಖರ್ಚು ಮಾಡಲು ಯೋಜಿಸಲಾಗಿದೆ ಎಂದು 'ಡೇಲಿ ಮೇಲ್' ವರದಿ ಮಾಡಿದೆ. ನಟ ಕೆವಿನ್ ಕಾಸ್ಟ್‌ನರ್ ಅವರ 160 ಎಕರೆ ಜಾಗದಲ್ಲಿ ಅದ್ಧೂರಿ ಮದುವೆ ನಡೆಯಲಿದೆ.
PublicNext
22/12/2024 08:33 pm