ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೆಜಿಲ್‌ನಲ್ಲಿ ಭೀಕರ ಅಪಘಾತ : ನಿಯಂತ್ರಣ ತಪ್ಪಿದ ಬಸ್, ಟ್ರಕ್​ವೊಂದಕ್ಕೆ ಡಿಕ್ಕಿ, 38 ಪ್ರಯಾಣಿಕರ ದುರಂತ ಅಂತ್ಯ

ಬ್ರೆಜಿಲ್‌ : ಟೈರ್ ಸ್ಫೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿದ ಬಸ್, ಟ್ರಕ್​ವೊಂದಕ್ಕೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 38 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯು ಆಗ್ನೇಯ ಬ್ರೆಜಿಲ್‌ನಲ್ಲಿ ನಡೆದಿದೆ.

ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಳಗಿನ ಜಾವ 4:00ರ ಸುಮಾರಿಗೆ ಸಾವೊ ಪಾಲೊ ಪ್ರದೇಶದಿಂದ ವಿಟೋರಿಯಾ ಡ ಕಾನ್‌ಕ್ವಿಸ್ಟಾಗೆ ತೆರಳುತ್ತಿತ್ತು. ವೇಗವಾಗಿ ತೆರಳುತ್ತಿರುವಾಗ ಬಸ್​ನ ಟೈರ್ ಸ್ಫೋಟಗೊಂಡಿದೆ. ಇದರ ಪರಿಣಾಮ ಅದೇ ವೇಗದಲ್ಲಿದ್ದ ಬಸ್​ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್​ಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ.

ತಕ್ಷಣ ಹಿಂದೆಯಿಂದ ಇನ್ನೊಂದು ವಾಹನ ಬಂದು ಬಸ್​ಗೆ ಗುದ್ದಿದೆ. ಇದರಿಂದ ಸ್ಥಳದಲ್ಲೇ 38 ಪ್ರಯಾಣಿಕರು ಹಸುನೀಗಿದ್ದಾರೆ. ಅಲ್ಲದೇ 9ಕ್ಕೂ ಹೆಚ್ಚು ಮಂದಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದೆ ಎಂದು ತಿಳಿಸಲಾಗಿದೆ. ಬಸ್​, ಟ್ರಕ್​​ಗೆ ಡಿಕ್ಕಿಯಾಗುತ್ತಿದ್ದಂತೆ ಕಾರೊಂದು ವೇಗವಾಗಿ ಬಂದು ಭೀಕರವಾಗಿ ಗುದ್ದಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದ್ದು ಮೂರು ವಾಹನಗಳು ಬೆಂಕಿಯಿಂದ ಧಗಧಗಿಸಿವೆ.

Edited By : Abhishek Kamoji
PublicNext

PublicNext

22/12/2024 09:18 am

Cinque Terre

103.53 K

Cinque Terre

1

ಸಂಬಂಧಿತ ಸುದ್ದಿ