ಬೆಂಗಳೂರು: ಬೆಳಗಾವಿಯಲ್ಲಿ ಕಾಂಗ್ರೆಸ್ ಶತಮಾನೋತ್ಸವ ಆಚರಣೆ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇವತ್ತು ಬೆಳಗಾವಿಯಲ್ಲಿ ಗಾಂಧಿ ಶತಮಾನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಗಾಂಧಿಜೀ ಅವರ ಹೆಸರಲ್ಲಿ ಒಂದು ವರ್ಷದ ಕಾರ್ಯಕ್ರಮ ಮಾಡ್ತಾರಂತೆ ಈ ಸರ್ಕಾರ.
ಗಾಂಧಿಜೀ ಹೆಸರು ಸ್ಮರಣೆಯ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಕಟೌಟ್ ಗಳೇ ಇಲ್ಲ. ಕಟೌಟ್ ಗಳಲ್ಲಿ ಈಗ ಆಧುನಿಕ ಗಾಂಧಿಗಳಿದ್ದಾರೆ.ದೊಡ್ಡ ದೊಡ್ಡ ಆಕಾಶದೆತ್ತರದ ಕಟೌಟ್ ಗಳನ್ನ ನೋಡಿದೆ. ಇವತ್ತು ಈ ರಾಜ್ಯ ಸರ್ಕಾರ ನಡೆಸ್ತಾ ಇದೆ ಅಲ್ವಾ?ಇವರು ಮೃಗೀಯವಾದ ರೀತಿಯಲ್ಲಿ ನಡೆಸ್ತಾ ಇದ್ದಾರೆ ಅಲ್ವಾ? ಇವರು ಗಾಂಧಿ ಸ್ಮರಣೆ ಮಾಡ್ತಾರಾ? ಇದರ ಬಗ್ಗೆ ಮುಂದೆ ಮಾತಾಡೋಣ. ಇನ್ನೂ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣ ಸಂಬಂಧಿಸಿದಂತೆ ಅಮೇಲೆ ಮಾತಾಡೋಣ ಬನ್ನಿ ಎಂದು ಹೆಚ್ ಡಿ ಕುಮಾರಸ್ವಾಮಿ ಹೋರಾಟರು.
PublicNext
26/12/2024 03:40 pm