ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: 'ದೇಶಕ್ಕಾಗಿ ಮಡಿದ ನಮ್ಮೂರ ಯೋಧನಿಗೆ ನಮನಗಳು' - ಸಂಸದ ಕೋಟ ಸಂತಾಪ

ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಹೆಮ್ಮೆಯ ಸೈನಿಕ ಅನೂಪ್ ಪೂಜಾರಿ ನಮ್ಮನ್ನಗಲಿದ್ದಾರೆ. ಶಾಲಾ ಜೀವನದಲ್ಲೇ ದೇಶ ಸೇವೆಯ ಕನಸು ಕಂಡು ಅದನ್ನು ಕಳೆದ 13 ವರ್ಷಗಳ ಹಿಂದೆ ನನಸು ಮಾಡಿಕೊಂಡು ಮರಾಠ ರೆಜಿಮೆಂಟಿನ ಸೈನಿಕನಾಗಿ ತಾಯಿ ಭಾರತಾಂಬೆಯ ಸೇವೆಗೆ ತನ್ನನ್ನು ಅರ್ಪಿಸಿಕೊಂಡವರು.

ನಿನ್ನೆ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಸೇನಾವಾಹನ ಕಂದಕಕ್ಕೆ ಉರುಳಿದ ಅವಘಡದಲ್ಲಿ ಅನೂಪ್ ಅವರು ಹುತಾತ್ಮರಾಗಿದ್ದು ನಮಗೆಲ್ಲ ಅತೀವ ದುಃಖ ತಂದಿದೆ.

ಅಗಲಿತ ಆತ್ಮಕ್ಕೆ ಸದ್ಗತಿ ದೊರೆಯಲಿ,ಭಗವಂತ ಅನೂಪ್ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾಥಿಸುತ್ತೇನೆ ಎಂದು ಸಂಸದ ಕೋಟ ಸಂತಾಪ ಸೂಚಿಸಿದ್ದಾರೆ.

Edited By : PublicNext Desk
PublicNext

PublicNext

25/12/2024 03:03 pm

Cinque Terre

12.48 K

Cinque Terre

0

ಸಂಬಂಧಿತ ಸುದ್ದಿ