ಚಿತ್ರದುರ್ಗ: ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ್ದ ಶಿಕ್ಷಕನನ್ನು ಸಸ್ಪಂಡ್ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ನಡೆದ ಘಟನೆ ಇದಾಗಿದ್ದು ಬಿ. ರಮೇಶ್ ವಿದ್ಯಾರ್ಥಿಗೆ ಥಳಿಸಿ ಅಮಾನತ ಆಗಿರುವ ಶಿಕ್ಷಕ ಅಂತ ತಿಳಿದು ಬಂದಿದೆ. ಹಿರಿಯೂರು ತಾಲೂಕಿ ಬಬ್ಬೂರು ಫಾರಂ ಸರ್ಕಾರಿ ಶಾಲಾ ಶಿಕ್ಷಕ ಬಿ. ರಮೇಶ್ 4ನೇ ತರಗತಿಯ ವಿದ್ಯಾರ್ಥಿಯನ್ನು ಥಳಿಸಿ, ಅವಾಚ್ಯವಾಗಿ ನಿಂದಿಸಿ, ಕಾಲಲ್ಲಿ ತುಳಿದು ಕ್ರೌರ್ಯ ಮೆರೆದಿದ್ರು. ಬೆನ್ನಿಗೆ ಬಾಸುಂಡೆ ಬರುವಂತೆ ಬಾರಿಸಿದ್ದು ಘಟನೆ ಸಂಬಂಧ ಭಾರತೀಯ ದಲಿತ ಸಂಘರ್ಷ ಸಮಿತಿಯಿಂದ ದೂರು ಸಲ್ಲಿಕೆ ಆಗಿದೆ. ಈ ಘಟನೆ ಸಂಬಂಧ ವಿಚಾರಣೆ ನಡೆಸಿ ಶಿಕ್ಷಣ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಬಿ. ರಮೇಶ್ ರನ್ನ ಅಮಾನತ್ತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಆದೇಶ ಹೊರಡಿಸಿದ್ದಾರೆ.
PublicNext
25/12/2024 11:28 am