ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಸೇತುವೆಯ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿದೆ. ನೂರಾರು ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಡ್ರೋನ್ ಮೂಲಕ ಸೆರೆ ಹಿಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮುಕ್ತಾಯ ಹಂತಕ್ಕೆ ತಲುಪಿದ ಐತಿಹಾಸಿಕ ಸಿಗಂದೂರು ಸೇತುವೆಯ ಮನಮೋಹಕ ದೃಶ್ಯ ಎಲ್ಲರ ಕಣ್ಮನ ಸೆಳೆಯುತ್ತಿದೆ. ಸದ್ಯ ಸಿಗಂದೂರು ತಲುಪಲು ಲ್ಯಾಂಚ್ ಮೂಲಕ ತೆರಳಬೇಕಾಗಿದ್ದು ಇದೀಗ ನೂರಾರು ಕೋಟಿ ವೆಚ್ಚದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಸೇತುವೆ ಕಾಮಗಾರಿ ಪೂರ್ಣಗೊಂಡರೆ ಸುತ್ತಮುತ್ತಲಿನ ನೂರಾರು ಹಳ್ಳಿ ಹಾಗೂ ಸಿಗಂದೂರು ದೇವಾಲಯ ಆಗಮಿಸುವ ಸಾವಿರಾರು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಇನ್ನೇನು ಕೆಲವೇ ಕೆಲವು ಕಾಮಗಾರಿ ಭಾಗಿ ಉಳಿದಿದೆ.
PublicNext
24/12/2024 10:46 pm