ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಪ್ ಕಾರ್ನ್‌ ಮೇಲೆ 3 ರೀತಿಯ ಜಿಎಸ್‌ಟಿ – ನಿರ್ಮಲಾ ಲೆಕ್ಕಾಚಾರಕ್ಕೆ ಜನಾ ಕಕ್ಕಾಬಿಕ್ಕಿ

ಜೈಪುರ : ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದ 55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪಾಪ್‌ ಕಾರ್ನ್ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದರ ಜೊತೆಗೆ ತೆರಿಗೆ ವಿಚಾರದಲ್ಲಿ ಹಲವು ಬದಲಾವಣೆ ಮಾಡುವ ನಿರ್ಧಾರವನ್ನೂ ತೆಗೆದುಕೊಂಡಿದ್ದಾರೆ.

ರುಚಿಗೆ ಅನುಗುಣವಾಗಿ ಜಿಎಸ್‌ಟಿಯ ವಿವಿಧ ಸ್ಲ್ಯಾಬ್‌ಗಳಲ್ಲಿ ಪಾಪ್‌ಕಾರ್ನ್ ಅನ್ನು ಸೇರಿಸುವ ನಿರ್ಧಾರದಿಂದಾಗಿ ಚಿತ್ರಮಂದಿರಗಳಲ್ಲಿ ಪಾಪ್‌ ಕಾರ್ನ್‌ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಪಾಪ್ ಕಾರ್ನ್ ಮೇಲೆ ಜಿಎಸ್‌ಟಿ ವಿಧಿಸುವ ಪ್ರಸ್ತಾವನೆಗೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಅದರಂತೆ ಪಾಪ್‌ಕಾರ್ನ್ ಸೇರಿದಂತೆ ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಿದ ರೆಡಿ-ಟು-ಈಟ್ ತಿಂಡಿಗಳು 12% ಜಿಎಸ್‌ಟಿಗೆ ಒಳಪಟ್ಟಿರುತ್ತವೆ. ಏತನ್ಮಧ್ಯೆ, ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್‌ (ಸಕ್ಕರೆಯಿಂದ ತಯಾರಿಸಿದ ಪಾಪ್‌ ಕಾರ್ನ್) ಮೇಲೆ 18% ಜಿಎಸ್‌ಟಿ, ಉಪ್ಪು ಮತ್ತು ಮಸಾಲೆಯುಕ್ತ ಪ್ಯಾಕ್ ಮಾಡದ ಮತ್ತು ಲೇಬಲ್ ಮಾಡದ ಪಾಪ್‌ಕಾರ್ನ್‌ಗೆ 5% ಜಿಎಸ್‌ಟಿ ಅನ್ವಯಿಸುತ್ತದೆ.

ಪಾಪ್‌ಕಾರ್ನ್‌ ದೇಶದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ದೊಡ್ದ ಉದ್ಯಮವಾಗಿ ಬೆಳೆದಿದೆ. ಕಳೆದ ವರ್ಷದ ಭಾರತದಲ್ಲಿ 1,200 ಕೋಟಿ ರೂ. ನಷ್ಟು ಪಾಪ್‌ಕಾರ್ನ್‌ ವ್ಯಾಪಾರವಾಗಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ ವಿಶ್ವಾದ್ಯತಂತ ಮಾರುಕಟ್ಟೆಯಲ್ಲಿ 8 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಯ ವ್ಯಾಪಾರವಾಗಿದೆ ಎಂದು ಸಭೆಯಲ್ಲಿ ಚರ್ಚಿಸಿರುವುದಾಗಿ ವರದಿಗಳು ತಿಳಿಸಿವೆ.

Edited By : Nirmala Aralikatti
PublicNext

PublicNext

24/12/2024 12:30 pm

Cinque Terre

51.46 K

Cinque Terre

11