ಅತ್ಯುತ್ತಮ ರುಚಿ, ಒಳ್ಳೆಯ ಗುಣಮಟ್ಟದ ಮೂಲಕವೇ ಗ್ರಾಹಕರ ಮನಗೆದ್ದ ಬಿಗ್ ಮಿಶ್ರಾ ಮಳಿಗೆಯ ತನ್ನ ವ್ಯಾಪ್ತಿಯನ್ನು ಇದೀಗ ಪಕ್ಕದ ರಾಜ್ಯ ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ.
ಹೌದು ! ನಾಳೆಯಿಂದಲೇ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಹೊಸದೊಂದು ಮಳಿಗೆಯನ್ನು ಬಿಗ್ ಮಿಶ್ರಾ ಸಂಸ್ಥೆ ಪ್ರಾರಂಭ ಮಾಡುತ್ತಿದೆ, ಈ ಮಳಿಗೆ ಸೇರಿ 250 ಹೊಸ ಮಳಿಗೆಗಳನ್ನು ದೇಶದ ವಿವಿಧ ಹೊರ ರಾಜ್ಯಗಳಲ್ಲೂ ವಿಸ್ತರಣೆ ಮಾಡುತ್ತಿದೆ.
ಬಾಯಲ್ಲಿ ನೀರು ತರಿಸುವಂತಹ ವಿವಿಧ ತೆರನಾದ ಸಿಹಿ ಖಾದ್ಯಗಳನ್ನು ಜನರಿಗೆ ಪರಿಚಯಿಸುವ ಬಿಗ್ ಮಿಶ್ರಾ ಹೊಟೇಲ್ ಉದ್ಯಮಕ್ಕೂ ಕಾಲಿಟ್ಟಿದೆ.
ಸಂಜಯ ಮಿಶ್ರಾ ಒಡೆತನದ ಇದೀಗ ದೇಶಾದ್ಯಂತ ತನ್ನ ಮಳಿಗೆ ಹೊಟೇಲ್ ಉದ್ಯಮ ವಿಸ್ತರಣೆ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಧಾರವಾಡ ಪೇಡಾ ಮೂಲಕವೇ ಎಲ್ಲೇಡೆ ಖ್ಯಾತಿ ಗಳಿಸಿದ್ದ ಬಿಗ್ ಮಿಶ್ರಾ ಈಗಾಗಲೇ ಸ್ವೀಟ್ ಮಾರ್ಟ್, ಹೊಟೇಲ್ ಉದ್ಯಮ ಸೇರಿ 10.000 ಕ್ಕೂ ಅಧಿಕ ಉದ್ಯೋಗಸ್ಥ ಕುಟುಂಬಗಳಿಗೆ ಆಶ್ರಯ ಕಲ್ಪಿಸಿದೆ.
1933 ರಲ್ಲಿ ಆರಂಭವಾದ ಬಿಗ್ ಮಿಶ್ರಾ 91 ವರ್ಷಗಳಿಂದಲೂ ಗ್ರಾಹಕರಿಗೆ ಸಿಹಿ ತಿನಿಸು, ಖಾರದ ವಿವಿಧ ಶೈಲಿಯ ಫಾಸ್ಟ್ ಫುಡ್, ಸ್ನ್ಯಾಕ್ಸ್ ಸೇರಿದಂತೆ ಹೊಟೇಲ್ ಉದ್ಯಮದಲ್ಲೂ ಒಳ್ಳೆಯ ಸವಿರುಚಿಯ ಆಹಾರ ನೀಡುತ್ತಾ ಗ್ರಾಹಕರ ಸ್ನೇಹಿ ಎಂದೇ ಪ್ರಶಂಸೆ ಪಡೆದಿದೆ.
ಸದ್ಯ ಕರ್ನಾಟಕದ ಬಿಗ್ ಮಿಶ್ರಾ ಇದೀಗ ದೇಶಾದ್ಯಂತ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ನೂತನ ಮಳಿಗೆ ಆರಂಭ ಮಾಡುತ್ತಿರುವುದಕ್ಕೆ ಗ್ರಾಹಕರು ಶುಭ ಹಾರೈಸಿದ್ದಾರೆ.
ಇನ್ನೂ ಮುಖ್ಯವಾದ ಮತ್ತೊಂದು ವಿಶೇಷ ಮಹಾರಾಷ್ಟ್ರದಂತೆ ಹೈದ್ರಾಬಾದ್'ನಲ್ಲಿ ಕೂಡಾ ಬಿಗ್ ಮಿಶ್ರಾ ಇದೇ ತಿಂಗಳು ಡಿಸೆಂಬರ್ 23 ರಂದು ಹೊಸ ಶಾಖೆ ಆರಂಭವಾಗಲಿದೆ..
PublicNext
16/12/2024 05:39 pm