ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಆಹಾರ ಅರಸಿ ಚಿರತೆ ಮನೆಯೊಂದರ ಬಾಗಿಲಿಗೆ ಬಂದ ಚಿರತೆ

ಚನ್ನರಾಯಪಟ್ಟಣ : ಹಿರೀಸಾವೆ ಹೋಬಳಿಯ ಹೊನ್ನಶೆಟ್ಟಿಹಳ್ಳಿಯ ಹೊರಭಾಗದಲ್ಲಿ ಆಹಾರ ಅರಸಿ ಚಿರತೆ ಮನೆಯೊಂದರ ಬಾಗಿಲಿಗೆ ಬಂದಿರುವ ಘಟನೆ ನಡೆದಿದೆ.ಗ್ರಾಮದ ಬಾಳಗಂಚಿ ರಸ್ತೆಯಲ್ಲಿರುವ ಯಶಸ್ವಿನಿ ಎಂಬುವವರ ತೋಟದ ಮನೆಯ ಬಳಿ ಸಂಜೆ 7 ಗಂಟೆಗೆ ಚಿರತೆ ಬಾಗಿಲ ಹತ್ತಿರ ಬಂದಿದೆ.

ಈ ಸಮಯದಲ್ಲಿ ಚಿರತೆ ಕಂಡ ಕೋಳಿಗಳು, ಕುರಿಗಳು ಚೀರಾಡಿವೆ. ತಕ್ಷಣ ಮನೆಯಲ್ಲಿದ್ದವರು ಬಾಗಿಲು ತೆಗೆದ ಶಬ್ದಕ್ಕೆ ಚಿರತೆ ಅಲ್ಲಿಂದ ಓಡಿ ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೊನ್ನಶೆಟ್ಟಿಹಳ್ಳಿ, ಮುದಬೆಟ್ಟ ಕಾವಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಆಗಾಗ ನಾಯಿ ಸೇರಿದಂತೆ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಿದೆ. ಇದರಿಂದಾಗಿ ಭಯಭೀತರಾಗಿರುವ ಗ್ರಾಮಸ್ಥರು ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

Edited By : Suman K
Kshetra Samachara

Kshetra Samachara

24/12/2024 12:05 pm

Cinque Terre

960

Cinque Terre

0

ಸಂಬಂಧಿತ ಸುದ್ದಿ