ಸಕಲೇಶಪುರ : ಹೊಸ ವರ್ಷಾಚರಣೆಯ ಪಾರ್ಟಿ ಮುಗಿಸಿ ಹೋಗುವಾಗ ಬೈಕ್ ತಂತಿ ಬೇಲಿಗೆ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟ ಘಟನೆ ಸಕಲೇಶಪುರ ತಾಲ್ಲೂಕಿನ ಗಾಣದ ಹೊಳೆ ಬಳಿ ತಡರಾತ್ರಿ ನಡೆದಿದೆ.
ಸಕಲೇಶಪುರ ಎಸಿಎಫ್ ಜೀಪ್ ಚಾಲಕ, ಜಂಬರಡಿ ಗ್ರಾಮದ ಚಿದಾನಂದ್ ಪುತ್ರ ರೋಹನ್ (25) ಮೃತ ಯುವಕ. ಸಕಲೇಶಪುರದಲ್ಲಿ ರಾತ್ರಿ ಹೊಸ ವರ್ಷದ ಪಾರ್ಟಿ ಮುಗಿಸಿ ಆತ ಬೈಕ್ ನಲ್ಲಿ ಮನೆಗೆ ಅತಿ ವೇಗದಿಂದ ಹೋಗುತ್ತಿದ್ದಾಗ ಆಯತಪ್ಪಿ ರಸ್ತೆ ಬದಿಯ ತಂತಿ ಬೇಲಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ರೋಹನ್ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
01/01/2025 01:48 pm