ಬಜಪೆ:ಮೇಯಲು ಬಿಟ್ಟ ದನಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಮೂಡಬಿದ್ರೆಯ ಕಲ್ಲಬೆಟ್ಟು ವಿನ ಕರಿಂಜೆ ಗ್ರಾಮದ ನಿವಾಸಿ ಮೊಹಮ್ಮದ್ ರಫೀಕ್ (31) ಹಾಗೂ ಮೂಡಬಿದ್ರೆಯ ಕಲ್ಲಬೆಟ್ಟು ವಿನ ನಿವಾಸಿ ಶೌಕತ್ ಆಲಿ(34)ಎಂದು ಗುರುತಿಸಲಾಗಿದೆ.
ತೆಂಕ ಎಡಪದವು ಗ್ರಾಮ ಪಂಚಾಯತ್ ಹಾಗೂ ತೆಂಕ ಎಡಪದವು ಗ್ರಾಮದ ಕೋರ್ಡೇಲ್ ಎಂಬಲ್ಲಿ ಮೇಯಲು ಬಿಟ್ಟಿದ್ದ ದನಗಳು ಕಳವು ಆಗಿದ್ದು,ಈ ಬಗ್ಗೆ ಬಜಪೆ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿತ್ತು.ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್ ರವರ ವಿಶೇಷ ತಂಡವು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.ಆರೋಪಿಗಳ ಬಗ್ಗೆ ಈಗಾಗಲೇ ಮೂಡಬಿದ್ರೆ,ಅಜೆಕಾರು,ಕಾರ್ಕಳ ಗ್ರಾಮಾಂತರ ಹಾಗೂ ಚಿಕ್ಕಮಗಳೂರು ಗ್ರಾಮಾಂತರ ಠಾಣೆಗಳಲ್ಲಿ ದನ ಕಳವಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಆರೋಪಿಗಳಿಂದ ಪೊಲೀಸರು ದನ ಕಳವಿಗೆ ಬಳಸಿದ ರಿಡ್ಜ್ ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು,ಆರೋಪಿಗಳು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಪಿಎಸ್ ಐ ರೇವಣಸಿದ್ದಪ್ಪ, ಪಿಎಸ್ ಐ ಕುಮಾರೇಶನ್, ಪಿಎಸ್ ಐ ಲತಾ, ಸಿಬ್ಬಂದಿಯವರಾದ ಸುಜನ್, ಮಂಜುನಾಥ, ರಶೀದ ಶೇಖ್, ದಯಾನಂದ, ಬಸವರಾಜ್ ಪಾಟೀಲ್, ಚಿದಾನಂದ, ಭರಮಾ ಬಡಿಗೇರ್, ಪ್ರಕಾಶ್ ಗೌಡ, ಮದು, ಕು|| ವಿದ್ಯಾ, ದುರ್ಗಾ ಪ್ರಸಾದ, ಸುರೇಶ್, ವಿರುಪಾಕ್ಷ, ಪರಸಪ್ಪ, ಪ್ರಜ್ವಲ್, ವಿರೇಶ್ ಹಿರೇಮಠ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
Kshetra Samachara
23/12/2024 08:05 pm