ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಮನವಿ

ಸಕಲೇಶಪುರ: ಕಾಫಿ ಬೆಳೆಗಾರರು ಅನೇಕ ಸಮಸ್ಯೆ ಎದುರಿದ್ದು, ಇವುಗಳ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸಬೇಕು

ಎಂದು ಸಂಸದ ಶ್ರೇಯಸ್ ಪಟೇಲ್ ಅವರು ಮನವಿ ಮಾಡಿದರು. ಪಟ್ಟಣದಲ್ಲಿಂದು ನಡೆದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದಿನ ಕಾರ್ಯಕ್ರಮದಲ್ಲಿ ನಮ್ಮದೇ ಜಿಲ್ಲೆಯವರಾದ ಕುಮಾರಣ್ಣ ಸೇರಿ ಇಬ್ಬರು ಕೇಂದ್ರ ಸಚಿವರು, ಅಕ್ಕಪಕ್ಕದ ಜಿಲ್ಲೆಗಳ ಜನಪ್ರತಿನಿಧಿಗಳು ಭಾಗಿಯಾಗಿರುವುದು ಸಂತಸದ ವಿಷಯ ಎಂದರು.

ಪ್ರಕೃತಿ ವಿಕೋಪ, ಬೆಲೆಯ ಏರಿಳಿಕೆ, ಕಾಡಾನೆ ಸಮಸ್ಯೆ ಹೀಗೆ ಹಾಸನ, ಚಿಕ್ಕಮಗಳೂರು, ಮಡಿಕೇರಿ ಜಿಲ್ಲೆಗಳ ಕಾಫಿ ಬೆಳೆಗಾರರು ಅನೇಕ ತೊಂದರೆ

ಅನುಭವಿಸುತ್ತಿದ್ದಾರೆ. ಇಂದು ಕಾಫಿಗೆ ಉತ್ತಮ ಬೆಲೆ ಇದೆ. ಆದರೆ ಅತಿವೃಷ್ಟಿಯಿಂದ ಬಹುತೇಕ ಫಸಲು ಹಾಳಾಗಿದೆ. ಬಹುಶಃ ಇಂದು ಕೇಂದ್ರ ಸಚಿವರಿಗೆ ಇದೆಲ್ಲವೂ ಮನವರಿಕೆ ಆಗಿದೆ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ರಾಜ್ಯ, ಕೇಂದ್ರದ ಸಚಿವರು, ಶಾಸಕರು ಹಾಗೂ ಎಲ್ಲ ಜನಪ್ರತಿನಿಧಿಗಳು ಸೇರಿದಂತೆ ಒಗ್ಗೂಡಿ ಕೆಲಸ ಮಾಡಿದರೆ

ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬಹುದು ಎಂದರು. ಸಂಸತ್ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕೇಂದ್ರದ ಹಲವು ಸಚಿವರಿಗೆ ಜಿಲ್ಲೆಯ ನಾನಾ ಸಮಸ್ಯೆಗಳ ಬಗ್ಗೆ ತಾವು ಮನವಿ ಸಲ್ಲಿಸಿದ್ದು, ಸ್ಪಂದನೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

Edited By : PublicNext Desk
Kshetra Samachara

Kshetra Samachara

23/12/2024 06:46 pm

Cinque Terre

760

Cinque Terre

0