ಹಾಸನ: ಸಕಲೇಶಪುರದಲ್ಲಿ ನಿನ್ನೆ ನಡೆದ ಕಾಫಿ ಬೆಳೆಗಾರರ ಸಮಾವೇಶಕ್ಕೆ ಇಬ್ಬರು ಕೇಂದ್ರ ಸಚಿವರು ಆಗಮಿಸಿ, ಹಲವು ಸಮಸ್ಯೆ ಆಲಿಸಿದ್ದು, ಜಿಲ್ಲೆಯ ಹಲವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿರುವುರಿಂದ ಸಮಾವೇಶ ಫಲಪ್ರದ ಆಗಿದೆ ಎಂದು ಮಾಜಿ ಸಚಿವ ಹೆಚ್.ಕೆ.ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕೇಂದ್ರ ಸಚಿವರ ಜೊತೆಗೆ ಸಂಸದರು, ಶಾಸಕರು ಹಾಗೂ ಮಾಜಿ ಶಾಸಕರೂ ಭಾಗಿಯಾಗಿದ್ದರು. ಎಲ್ಲರೂ ಬೆಳೆಗಾರರು, ಕಾರ್ಮಿಕರ ಬೇಡಿಕೆಗಳ ಬಗ್ಗೆ ದನಿ ಎತ್ತಿ ಸ್ಪಂದಿಸಿದ್ದಾರೆ. ಜೆಡಿಎಸ್ ಪಕ್ಷದ ವತಿಯಿಂದ ಎಲ್ಲರಿಗೂ ಕೃತಜ್ಞತೆ ಹೇಳಿದರು. ಇದೇ ವೇಳೆ ಆಯೋಜ ಕರ ಕಡೆಯಿಂದ ಕೆಲ ಲೋಪ ದೋಷ ಆಗಿದ್ದು, ಈ ಬಗ್ಗೆ ಅವರನ್ನೇ ಕೇಳಿ ಎಂದರು.
Kshetra Samachara
24/12/2024 06:14 pm