ಬೆಳಗಾವಿ : ಎರಡು ದಿನ ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. 26 ವರ್ಷ ಸಂಘರ್ಷದಿಂದ ಮೇಲೆ ಬಂದಿದ್ದೇನೆ. ನಾನೇನು ರೆಡ್ ಕಾರ್ಪೆಟ್ ಮೇಲೆ ಬಂದಿಲ್ಲ. ಹಾರ ತುರಾಯಿ ಹಾಕಿಸಿಕೊಂಡು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ. ಎರಡು ದಿನ ಬಹಳಷ್ಟು ಆಘಾತವಾಗಿತ್ತು. ನಾನು ಮತ್ತೆ ಸಭಾಪತಿಗೆ ದೂರು ಕೊಡ್ತಿನಿ. ನಾನು ಸಿ ಟಿ ರವಿ ವಿರುದ್ಧ ಹೋರಾಟ ಮಾಡ್ತಿನಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಬಳಿ ಇರೋ ದಾಖಲೆಯನ್ನು ಬಿಡುಗಡೆ ಮಾಡ್ತಿನಿ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್ ಎಸ್ ಎಲ್ ವರದಿ ಬೇಗ ಬಹಿರಂಗವಾಗಬೇಕು. ಬಿಜೆಪಿಯವರು ಸಿಟಿ ರವಿ ಬೆನ್ನಿಗೆ ನಿಂತಿದ್ದಾರೆ. ಏನಾಗಿದೆ ಗಾಯ, ಎಷ್ಟಾಗಿದೆ. ಸಿಟಿ ರವಿ ಅವರೇ ನೀವು ನನಗೆ ಆ ಪದ ಬಳಿಕೆ ಮಾಡಿದ್ದಿರಿ.
ಮಾಧ್ಯಮಗಳ ಮೂಲಕ ದಾಖಲೆ ಬಿಡುಗಡೆ ಮಾಡ್ತಿನಿ. ಎನ್ ಕೌಂಟರ್ ಅಂತಿರಾ ನಾಚಿಕೆ ಆಗಲ್ವಾ. ಇಡೀ ಕರ್ನಾಟಕ ರಾಜ್ಯದ ಜನ ಛೀಮಾರಿ ಹಾಕ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಎನ್ ಮಾಡಬೇಕು ಮಾಡಿದ್ದಾರೆ. ಮೂಲ ಕಾರಣ ಬಿಟ್ಟು ಉಳಿದಿದ್ದು ಹೇಳಿತ್ತಿದ್ದಾರೆ. ದಾರಿ ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಎಲ್ಲಾ ನ್ಯಾಯಾಲಯ ಮುಗಿದ ಮೇಲೆ ದೇವನೊಬ್ಬನು ಇದ್ದಾರೆ. ಪ್ರಧಾನಿ, ರಾಷ್ಟ್ರಪತಿ ಪತ್ರ ಬರುತ್ತೇನೆ, ಸಾಧ್ಯವಾದ್ರೆ ಭೇಟಿಯಾಗುತ್ತೇನೆ. ರಾಜಕೀಯ ಹಿಂದಕ್ಕೆ ಸೇರಿಸಬೇಕು ಮಾನ, ಮಾರ್ಯಾದೆ ಇಲ್ಲದವರು ಈ ರೀತಿಯ ಯತ್ನ ಮಾಡ್ತಾರೆ ಎಂದು ಹರಿಹಾಯ್ದರು.
ಬಳಿಕ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ ರವಿ ಆಕ್ಷೇಪಾರ್ಹ ಹೇಳಿಕೆ ಇರುವ ವಿಡಿಯೋ ರಿಲೀಸ್ ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿಗೆ ಕೌಂಟರ್ ಕೊಟ್ಟರು
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಎರಡು ಪ್ರತ್ಯೇಕ ವಿಡಿಯೋ ರಿಲೀಸ್ ಮಾಡಿದರು, ಒಂದು ವಿಡಿಯೋದಲ್ಲಿ ಸಿಟಿ ರವಿ ಆಕ್ಷೇಪಾರ್ಹ ಪದ ಬಳಸಿದ್ದು. ಮತ್ತೊಂದು ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ಡ್ರಗ್ ಅಡಿಟ್ ಅಂದಿದ್ದ ವಿಡಿಯೋ ರಿಲೀಸ್ ಮಾಡಿ ಬಿಜೆಪಿ ನಾಯಕರಿಗೆ ಕೌಂಟರ್ ಕೊಟ್ಟರು.
PublicNext
23/12/2024 03:11 pm