ಸುಂಟಿಕೊಪ್ಪ: ತಾಂತ್ರಿಕ ಸಮಸ್ಯೆ ಎದುರಾಗಿ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಮಾದಾಪುರ ಸಮೀಪದ ಗರಗಂದೂರು ಬಳಿ ನಡೆದಿದೆ.
ಜಂಬೂರುಬಾಣೆ ನಿವಾಸಿ ನಂಜಪ್ಪ ಅವರ ಪುತ್ರ ಈಶ್ವರ್ (33) ಮೃತ ದುರ್ದೈವಿಯಾಗಿದ್ದಾರೆ. ರಾತ್ರಿ ಸುಮಾರು 10:30ರ ಸುಮಾರಿಗೆ ಸುಂಟಿಕೊಪ್ಪದಿಂದ ಜಂಬೂರಿಗೆ ಈಶ್ವರ್ ತಮ್ಮ ಪಿಕಪ್ ವಾನಹದಲ್ಲಿ ಮನೆಗೆ ಹಿಂದಿರುಗುವ ಸಂದರ್ಭ ಗರಗಂದೂರು ಬಳಿ ವಾಹನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಪರಿಣಾಮ ಗಾಯಗೊಂಡು ವಾಹನದ ಅಡಿಯಲ್ಲಿ ಈಶ್ವರ ಸಿಲುಕಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಆಗಮಿಸಿ ಸಿಲುಕಿಕೊಂಡಿದ್ದ ಚಾಲಕನನ್ನು ವಾಹನದಿಂದ ತೆಗೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಈಶ್ವರ್ ನಿಧನರಾಗಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
23/12/2024 10:03 am