ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಪಿಕ್ ಆಪ್ ವಾಹನ ಮತ್ತು ಕಾರು ನಡುವೆ ಅಪಘಾತ - ಓರ್ವ ಗಂಭೀರ

ಕುಶಾಲನಗರ: ಪಿಕ್‌ಆಪ್ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಚಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯಲ್ಲಿ ನಡೆದಿದೆ.

ಸುಂಟಿಕೊಪ್ಪ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಅಶೋಕ್ ಲೈಲ್ಯಾಂಡ್ ಪಿಕ್ ಅಪ್ ವಾಹನ ಮತ್ತು ಬೆಂಗಳೂರಿನಿಂದ ಮಡಿಕೇರಿಗೆ ಬರುತ್ತಿದ್ದ ಮಹೇಂದ್ರ ಕಾರಿನ ನಡುವೆ ಅವಘಡ ಸಂಭವಿಸಿದೆ. ಇದರಿಂದ ಕಾರಿನ ಚಾಲಕ ಸ್ಟೇರಿಂಗ್ ನಡುವೆ ಅರ್ಧ ಗಂಟೆ ಸಿಕ್ಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದು ನೆರವಿಗೆ ಧಾವಿಸಿ ಬಂದ ಸ್ಥಳೀಯರು ಇನ್ನೊಂದು ಲಾರಿಯಿಂದ ಕಾರಿನ ಮುಂಭಾಗಕ್ಕೆ ಹಗ್ಗ ಕಟ್ಟಿ ಎಳೆದು, ಚಾಲಕನನ್ನು ಹೊರಕ್ಕೆ ತೆಗೆದಿದ್ದು ಗಂಭೀರವಾಗಿ ಗಾಯಗೊಂಡ ಚಾಲಕನ್ನ ಆಸ್ಪತ್ರೆಗೆ ಸೇರಿಸಿದ್ದು ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

22/12/2024 03:46 pm

Cinque Terre

940

Cinque Terre

0

ಸಂಬಂಧಿತ ಸುದ್ದಿ