ಕುಶಾಲನಗರ: ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಹಾರಂಗಿ ಬಳಿ ನಡೆದಿದೆ.
ಹಾರಂಗಿ ಅತ್ತೂರು ಜ್ಞಾನ ಗಂಗಾ ಶಾಲಾ ಸಮೀಪ ಕುಶಾಲನಗರ ಮೀಸಲು ಅರಣ್ಯದಿಂದ ಮತ್ತೋಂದು ಬದಿಗೆ ದಾಟುವ ಸಂಧರ್ಬದಲ್ಲಿ ವೇಗಾವಾಗಿ ಬಂದಿರೋ ಅಪರಿಚಿತ ವಾಹನ್ನಕ್ಕೆ ಡಿಕಿಯಾಗಿ ಸಾವನ್ನಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಂದಾಜು 4-5 ವರ್ಷ ಪ್ರಾಯದ ಗಂಡು ಜಿಂಕೆ ಸಾವನ್ನಪ್ಪಿದೆ. ಇನ್ನೂ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಅಪರಿಚಿತ ವಾಹನ ಪತ್ತೆಗೆ ಅಧಿಕಾರಿಗಳು ಮುಂದಿನ ಕ್ರಮ ವಹಿಸಿದ್ದಾರೆ.
PublicNext
19/12/2024 09:45 am