ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಪೋಕ್ಸೋ ಪ್ರಕರಣ ಹೆಚ್ಚಳ, ಸಾಕ್ಷ್ಯಗಳ ಕೊರತೆ, ಆರೋಪಿಗಳಿಗಿಲ್ಲ ಶಿಕ್ಷೆ

ಬೆಂಗಳೂರು: ರಾಜ್ಯದಲ್ಲಿ ದಿನ ಕಳೆದ ಹಾಗೇ ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣ ಡಬಲ್ ಆಗುತ್ತಿದೆ. ಲವ್ ಪ್ರಾಬ್ಲಂ, ಮಕ್ಕಳ ಭವಿಷ್ಯಕ್ಕೆ ಹೆದರಿ ಪ್ರಕರಣ ತನಿಖೆ ನಡೆಸಲು ಪೋಷಕರು ಹಿಂದೇಟು ಹಾಕ್ತಾ ಇದ್ದಾರೆ. ಪ್ರಕರಣ ಹೆಚ್ಚಾದರೂ ಆರೋಪಿಗಳಿಗೆ ಶಿಕ್ಷೆ ಆಗ್ತಿಲ್ಲವಂತೆ . ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಕಳೆದ 35 ತಿಂಗಳಲ್ಲಿ ರಾಜ್ಯದಲ್ಲಿ 10, ಸಾವಿರದ 247 ಪ್ರಕರಣ ದಾಖಲಾಗಿದ್ದು ಬೆಂಗಳೂರು ನಗರದಲ್ಲಿ ಈ ಪೈಕಿ ಸಾವಿರದ 521 ಪ್ರಕರಣ ದಾಖಲಾಗಿದೆ.

ಈ ಮೂಲಕ ಪೋಕ್ಸೋ ಪ್ರಕರಣದಲ್ಲಿ ಪ್ರಥಮ ಸ್ಥಾನ ಬೆಂಗಳೂರು ಪಡೆದಿದೆ.. ಇನ್ನು ಪೋಕ್ಸೋ ಪ್ರಕರಣದಲ್ಲಿ 179 ಮಂದಿಗೆ ಮಾತ್ರ ಶಿಕ್ಷೆ ಅನ್ನೋದೇ ವಿಪರ್ಯಾಸ. ಜೊತೆಗೆ ಈ ಪೈಕಿ ಈಗಾಗಲೇ 2 ಸಾವಿರದ 179 ಪ್ರಕರಣ ಖುಲಾಸೆ ಆಗಿದ್ದು ಸದ್ಯ 6 ಸಾವಿರದ 945 ಪ್ರಕರಣ ವಿಚಾರ ಹಂತದಲ್ಲಿದೆ. ಇನ್ನೂ ಯಾವ್ಯಾವ ಜಿಲ್ಲೆ ಲಿಸ್ಟ್ ಅಲ್ಲಿದೆ ಅಂತ ನೋಡೋದಾದ್ರೆ

HEADER ಪೋಕ್ಸೋ ಪ್ರಕರಣ

-ಬೆಂಗಳೂರು ನಗರ 1,521

-ಮೈಸೂರು 585

-ಶಿವಮೊಗ್ಗ 550

-ಚಿಕ್ಕಬಳ್ಳಾಪುರ 466

-ಹಾಸನ - 449

-ಬೆಳಗಾವಿ 426

Edited By : Shivu K
PublicNext

PublicNext

22/12/2024 07:02 pm

Cinque Terre

21.27 K

Cinque Terre

0