ಬೆಂಗಳೂರು: ಬೆಳಗಾವಿ ಸುವರ್ಣಸೌಧದಲ್ಲಿ ಸಿ.ಟಿ. ರವಿಯವರು ತನ್ನ ಬಂಧನದ ಕುರಿತು ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಂದು ನಡೆದ ಘಟನೆ ಬಗ್ಗೆ ವಿವರವಾಗಿ ತಿಳಿಸಿದರು.
ಬಂಧನದ ವೇಳೆ ಊರಿಂದ ಊರಿಗೆ ಅಲೆದಾಡಿಸುತ್ತಿರುವ ಸಮಯದಲ್ಲಿ ಎಸ್ಪಿ ಭೀಮಾಶಂಕರ್ ಗುಳೇದ್ ಸೇರಿದಂತೆ ಕೆಲ ಪೊಲೀಸರು ಬಲವಂತವಾಗಿ ನನ್ನ ಮೊಬೈಲ್ ಫೋನ್ ಕಿತ್ತುಕೊಳ್ಳಲು ಮುಂದಾಗಿದ್ರು. FIR ಕಾಪಿ ತೋರಿಸಿ, ನಾನೇ ಕೊಡ್ತೀನಿ ಅಂದರೂ ಅವರಲ್ಲಿ ಉತ್ತರವಿರಲಿಲ್ಲ ಎಂದು ಆರೋಪಿಸಿದರು.
ಅಲ್ದೇ ಪೊಲೀಸರಿಗೆ ಮೇಲಿಂದ ನಿರಂತರವಾಗಿ ಯಾರೋ ಡೈರೆಕ್ಷನ್ ನೀಡುತ್ತಿದ್ದರು. ಆದ್ರೆ, ಡೈರೆಕ್ಷನ್ ಮಾಡ್ತಿದ್ದವರು ಯಾರು ಎಂಬುದು ಗೊತ್ತಿಲ್ಲ. ಮೇಲಿಂದಲೇ ಯಾರೋ ನನ್ನ ಮೊಬೈಲ್ ಫೋನ್ ಕಿತ್ತುಕೊಳ್ಳಲು ಪೊಲೀಸರಿಗೆ ತಾಕೀತು ಮಾಡಿದರು. ಇದಕ್ಕಾಗಿ ಪೊಲೀಸರು ನನ್ನನ್ನು ಎಳೆದಾಡಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ರು ಎಂದು ಆರೋಪಿಸಿದರು.
PublicNext
21/12/2024 10:33 pm