ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಅಕ್ಷರ ದಾಸೋಹ ನೌಕರರಿಗೆ ಬಜೆಟ್ ನಲ್ಲಿ ವೇತನ ಹಣ ಮೀಸಲಿಡಲು ಅಗ್ರಹಿಸಿ ಧರಣಿ

ಮಣಿಪಾಲ: ಅಕ್ಷರ ದಾಸೋಹ ನೌಕರರಿಗೆ ರಾಜ್ಯ ಹಾಗೂ ಕೇಂದ್ರ ಬಜೆಟ್ ನಲ್ಲಿ ವೇತನ ಹೆಚ್ಚಳಕ್ಕೆ ಹಣ ಮೀಸಲಿಡುವಂತೆ ಆಗ್ರಹಿಸಿ ಇಂದು ಧರಣಿ ನಡೆಯಿತು. ಸಿಐಟಿಯು ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾಧಿಕಾರಿ ಕಛೇರಿ ಮುಂದೆ ತಮ್ಮ21 ಪ್ರಮುಖ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ ಧರಣಿ ನಡೆಸಿತು.ಧರಣಿ ನಂತರ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಯಿತು. ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ನೌಕರರ ಸಂಘ ದ ಜಿಲ್ಲಾ ಕಾರ್ಯದರ್ಶಿ ಸುನಂದ,ಉಡುಪಿ ತಾಲೂಕು ಅಧ್ಯಕ್ಷ ರಾದ ರತ್ನ ಕಾರ್ಯದರ್ಶಿ ಸುಲೋಚನ,ಕೋಶಾಧಿಕಾರಿ ಮಂಜುಳಾ, ಮುಖಂಡರಾದ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/12/2024 06:06 pm

Cinque Terre

544

Cinque Terre

0

ಸಂಬಂಧಿತ ಸುದ್ದಿ