ಬೆಂಗಳೂರು: ಟ್ರಾಫಿಕ್ ಕಿರಿಕಿರಿ....ಟ್ರಾಫಿಕ್ ದಂಡದ ಗೊಂದಲಗಳಿಗೆ ಬೆಂಗಳೂರು ಸಂಚಾರಿ ಪೊಲೀಸ್ ಬ್ರೇಕ್ ಹಾಕಿದ್ದಾರೆ. ದೂರು, ದಂಡ ಪಾವತಿ, ಗೊಂದಲಗಳಿಗೆ ಪರಿಹಾರ ನೀಡಿದ್ದು ಒಂದೇ ಕ್ಲಿಕ್‌ನಲ್ಲಿ ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡಿ, ದೂರನ್ನು ದಾಖಲಿಸಿ ಮತ್ತು ನೈಜ - ಸಮಯದಲ್ಲಿ ಟ್ರಾಫಿಕ್ ಕುರಿತಾದ ಅಪ್‌ಡೇಟ್ ಪಡೆಯಲು ಸೂಕ್ತ ವೇದಿಕೆ ಕಲ್ಪಿಸಿದೆ.
ನಗರ ಸಂಚಾರಿ ಪೊಲೀಸ್ ವೆಬ್‌ಸೈಟ್ ಅಪ್ಡೇಟ್ ಮಾಡಿದ್ದು ಪೂರ್ತಿ ಮಾಹಿತಿ ಲಭ್ಯವಾಗಲಿದೆ. ಟ್ರಾಫಿಕ್ ಇಂದ ದಂಡದವರೆಗೂ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಈ ಬಗ್ಗೆ ಬೆಂಗಳೂರು ಸಂಚಾರಿ ಜಂಟಿ ಆಯುಕ್ತ ಅನುಚೇತ್ ಮಾಹಿತಿ ಕೊಟ್ಟಿದ್ದಾರೆ.
ದಂಡದ ವಿಚಾರದಲ್ಲಿ ಸಾಕಷ್ಟು ಗೊಂದಲಗಳನ್ನ ವಾಹನ ಸವಾರರು ಎದುರಿಸುತ್ತಿದ್ದಾರೆ.. ನಿಯಮ ಉಲ್ಲಂಘಿಸದರೇ ಇದ್ದರೂ ದಂಡ ಹಾಕುವುದು, ತಪ್ಪು ಗ್ರಹಿಕೆಯಿಂದ ದಂಡ ಹಾಕುವುದು ಸಾಮಾನ್ಯವಾಗಿತ್ತು.ಇದರಿಂದ ವಾಹನ ಸವಾರರು ಸಾಕಷ್ಟು ಪರದಾಡುತ್ತಿದ್ದರು.
ವೆಬ್ ಸೈಟ್ ಅಪ್ಡೇಟ್ ಮೂಲಕ ಮತ್ತಷ್ಟು ಸುಲಭಗೊಳಿಸಿದ ಇಲಾಖೆ ನೀವು ಕೂತಲ್ಲೇ ಲೈವ್ ಟ್ರಾಫಿಕ್ ಅಪ್ಡೇಟ್ ಪಡೆಯುವ ಸೌಲಭ್ಯ ಒದಗಿಸಿ ಕೊಟ್ಟಿದೆ. ಲೈವ್ ಟ್ರಾಫಿಕ್ ನೋಡಿ ಮಾರ್ಗ ಬದಲಿಸಿಕೊಳ್ಳಲು ಸಹಾಯ ಆಗುತ್ತೆ.
ನ್ಯಾವಿಗೇಷನ್ ವಿಭಾಗದ ಅಪ್ಡೇಟ್ ಮಾಡಿ ಇನ್ನಷ್ಟು ಸುಲಭ ಮಾಡಿದ ಪೊಲೀಸರು, ಸಂಚಾರ ನಿರ್ವಹಣೆ, ನಿಯಮ ಜಾರಿ ಮತ್ತು ರಸ್ತೆ ಸುರಕ್ಷತೆ ವಿಭಾಗಗಳ ಅಪ್ಡೇಟ್ ಕೊಟ್ಟಿದ್ದು ಸಂಚಾರ ಉಲ್ಲಂಘನೆ ವರದಿ, ಸಂಚಾರಕ್ಕೆ ಸಂಬಂಧಿಸಿದ ದೂರು, ಸಂಚಾರ ಸಲಹೆ, ಸಂಚಾರ ದಂಡ ಪಾವತಿಯನ್ನ ಇಲಾಖೆ ಸುಲಭ ಮಾಡಿದೆ.
PublicNext
21/12/2024 04:06 pm